Video| ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ; ಆರೋಪಿ ವಶಕ್ಕೆ

New Project (1)
Published on

ದಾವಣಗೆರೆ: ವಿಜಯಸಂಕಲ್ಪ ಯಾತ್ರೆ ಮಹಾಸಂಗಮದ ನಿಮಿತ್ತ ಇಂದು ದಾವಣೆಗೆರೆಯಲ್ಲಿ ಪ್ರಧಾನಿ ಮೋದಿ ರೋಡ್​​​ ಶೋ ನಡೆಸುತ್ತಿದ್ದ ವೇಳೆ ಭದ್ರತಾ ಲೋಪವಾಗಿದ್ದು ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಗಿದೆ.

ವಿಡಿಯೋದಲ್ಲಿ ಕಂಡು ಬರುವ ಹಾಗೆ ವ್ಯಕ್ತಿಯೋರ್ವ ಬೆಂಗಾವಲು ಪಡೆಯತ್ತ ಓಡಿ ಹೋಗಲು ಯತ್ನಿಸುತ್ತಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಆ ವ್ಯಕ್ತಿಯನ್ನ ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ಬಂಧಿತ ವ್ಯಕ್ತಿಯೂ ಕೊಪ್ಪಳ ಮೂಲದ ಬಸವರಾಜ್​ ಕಾಟಗಿ ಎಂದು ಗುರತು ಹಿಡಿಯಲಾಗಿದ್ದು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಜನಸ್ತೋಮ ಹೆಚ್ಚಿದ ಕಾರಣ ಬ್ಯಾರಿಕೇಡ್​ಗಳ ಮೂಲಕ ಹಾರಿ ಬಂದಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕ ಕ್ರಮಗಳನ್ನ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net