More

    ಡಬಲ್​ ಇಂಜಿನ್​ ಸರ್ಕಾರ ಮತ್ತೆ ಅಧಿಕಾರಕ್ಕೆ ತರಲು ಕರ್ನಾಟಕ ಜನತೆಯಿಂದ ನಿರ್ಧಾರ: ಪ್ರಧಾನಿ ಮೋದಿ

    ದಾವಣಗೆರೆ: ರಾಜ್ಯದಲ್ಲಿ ಡಬಲ್​ ಇಂಜಿನ್​ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರಲು ಕರ್ನಾಟಕದ ಜನತೆ ನಿರ್ಧಾರ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    ದಾವಣಗೆರೆಯಲ್ಲಿ ನಡೆದ ಬಿಜೆಪಿವ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

    ದಾವಣಗೆರೆ ಜನತೆಗೆ ನನ್ನ ನಮಸ್ಕಾರಗಳು. ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಹಾಗೂ ಕರ್ನಾಟಕದ ಬಿಜೆಪಿ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ದಾವಣಗೆರೆಗೆ ನಾನು ಬಂದಾಗಲೆಲ್ಲ ನಿಮ್ಮ ಆಶೀರ್ವಾದ ಹೆಚ್ಚುತ್ತಲೇ ಇದೆ. ತಮ್ಮೆಲ್ಲರ ದರ್ಶನ ಪಡೆಯುವ ಅವಕಾಶ ನನಗೆ ಸಿಕ್ಕಿದೆ. ಇದಕ್ಕಾಗಿ ಕರ್ನಾಟಕ ಬಿಜೆಪಿಗೆ ಧನ್ಯವಾದಗಳು ಎಂದರು.

    ಇದನ್ನೂ ಓದಿ: ಮೋದಿ ಬಳಿಕ ಗೌಡ ವಿವಾದ: ‘ಗೌಡ’ರನ್ನು ಅವಮಾನಿಸಿದ್ದಾರೆ ಎಂದು ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸರಿಗೆ ದೂರು

    ಈ ಸಭೆ ಆಗುತ್ತಿರುವ ಸ್ಥಳ ದಾವಣಗೆರೆ ಹಾಗೂ ಹರಿಹರದ ನಡುವೆ ಇದೆ. ತುಂಗಭದ್ರೆಯರ ಆಶೀರ್ವಾದ ಈ ಸ್ಥಳಕ್ಕಿದೆ. ಹರಿ ಮತ್ತು ಹರರ ಸಂಗಮ ಈ ಸ್ಥಳದಲ್ಲಿ ಆಗುತ್ತದೆ. ಇಂಥ ಸ್ಥಳದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮವಾಗುತ್ತಿದೆ. ನನಗೆ ಇಂಥ ಯಾತ್ರೆಗಳ ದರ್ಶನ ಮಾಡಿದ ಪುಣ್ಯ ಸಿಗುತ್ತಿದೆ ಎಂದು ಹೇಳಿದರು.

    ಈ ವಿಜಯ ಸಂಕಲ್ಪ ಯಾತ್ರೆಯು ವಿಜಯ ಮಹೋತ್ಸವದಂತೆ ಕಾಣುತ್ತಿದೆ. ಕಲಬುರಗಿ ಪಾಲಿಕೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಖರ್ಗೆಯ ಮನೆಯಂಗಳದಲ್ಲೇ ಬಿಜೆಪಿ ಗೆಲುವುಬ ಸಾಧಿಸಿದೆ. ಹಾಗಾಗಿ ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸೂಚಕವಾಗಿದೆ. ರಾಜ್ಯದಲ್ಲಿ ಡಬಲ್​ ಇಂಜಿನ್​ ಸರ್ಕಾರ ಮತ್ತೆ ತರಲು ಕರ್ನಾಟಕದ ಜನತೆ ನಿರ್ಧಾರ ಮಾಡಿದ್ದಾರೆ ಎನ್ನುವ ಮೂಲಕ ಪ್ರಧಾನಿ ಮೋದಿ ಖರ್ಗೆ ಅವರ ಕಾಲೆಳೆದರು.

    ದೀರ್ಘಕಾಲದವರೆಗೂ ಕರ್ನಾಟಕ ಅವಕಾಶವಾದಿ ಮತ್ತು ಸ್ವಾರ್ಥ ಸರ್ಕಾರಗಳನ್ನು ನೋಡಿದೆ. ಇದು ರಾಜ್ಯಕ್ಕೆ ಪರಿಣಾಮ ಬೀರಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯ ಸ್ಥಿರ ಸರ್ಕಾರದ ಅವಶ್ಯಕತೆ ಇದೆ. ಬಿಜೆಪಿಯು ಕರ್ನಾಟಕವನ್ನು ಭಾರತದ ಅಭಿವೃದ್ಧಿಗೆ ಉದಯೋನ್ಮುಖ ಶಕ್ತಿಯನ್ನಾಗಿ ಮಾಡಲು ಬಯಸುತ್ತದೆ. ಆದರೆ, ಕಾಂಗ್ರೆಸ್ ರಾಜ್ಯವನ್ನು ತನ್ನ ನಾಯಕರಿಗೆ ಎಟಿಎಂ ಮಾಡಲು ಬಯಸುತ್ತದೆ ಎಂದು ಕಾಂಗ್ರೆಸ್​ ಅನ್ನು ಪ್ರಧಾನಿ ಮೋದಿ ಕುಟುಕಿದರು.

    ಇದನ್ನೂ ಓದಿ: ಮೈಸೂರಿನಲ್ಲಿ ಕೇರಳ ಯುವತಿ ಸಾವು: ಪಾಲಕರ ಆರೋಪ ಬೆನ್ನಲ್ಲೇ ಸ್ನೇಹಿತ ಪೊಲೀಸ್​ ವಶಕ್ಕೆ

    ಮುಂದಿನ ಮೂರು ತಿಂಗಳು ಕಠಿಣ ಪರಿಶ್ರಮ ವಹಿಸಬೇಕು. ಪ್ರತಿ ಬೂತ್​ಗೆ ತಲುಪಿ ಉತ್ಸಾಹ, ಹೊಸ ಶಕ್ತಿ ತುಂಬಿಸಿ. ಪ್ರತಿ ಬೂತ್​ ಗೆಲ್ಲುವ ಸಂಕಲ್ಪ ಮಾಡುತ್ತೀರಲ್ಲವೇ? ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ ಪ್ರಧಾನಿ, ಇತ್ತೀಚೆಗೆ ಮಾಜಿ ಸಿಎಂ ಒಬ್ಬರು ತಮ್ಮದೇ ಕಾರ್ಯಕರ್ತರ ಕಪಾಳಕ್ಕೆ ಬಾರಿಸಿದರು. ತನ್ನದೇ ಪಕ್ಷದ ಕಾರ್ಯಕರ್ತರಿಗೆ ಗೌರವ ಕೊಡದವರು ಜನತಾ ಜನಾರ್ದನ ಎಂದು ಹೇಗೆ ಕರೆಸಿಕೊಳ್ಳುತ್ತಾರೆ? ಬಿಜೆಪಿಯಲ್ಲಿ ಎಲ್ಲ ಕಾರ್ಯಕರ್ತರೂ ಸಮಾನರು. ಕರ್ನಾಟಕದ ಪ್ರತಿ ಕಾರ್ಯಕರ್ತ ನನ್ನ ಸಹೋದರ ಇದ್ದಂತೆ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರೇಳೆದೆ ಟೀಕಾ ಪ್ರಹಾರ ನಡೆಸಿದರು.‘

    ಯಾವ ರಾಜ್ಯದಲ್ಲಿ ಎಷ್ಟಿವೆ ಹುಲಿಗಳು?; ಪ್ರಧಾನಿ ಮೋದಿ ಅವರಿಂದ ಏ.​ 9ರಂದು ಮೈಸೂರಿನಲ್ಲಿ ಅಂಕಿಅಂಶ ಬಿಡುಗಡೆ

    ದಾವಣಗೆರೆಯಲ್ಲಿ ನರೇಂದ್ರ ಮೋದಿ ರೋಡ್ ಶೋ; ಪ್ರಧಾನಿಗೆ ಬಿಎಸ್​ವೈ, ಬೊಮ್ಮಾಯಿ ಸಾಥ್

    ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಏ.​ 5ಕ್ಕೆ ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts