More

    ಮೈಸೂರಿನಲ್ಲಿ ಕೇರಳ ಯುವತಿ ಸಾವು: ಪಾಲಕರ ಆರೋಪ ಬೆನ್ನಲ್ಲೇ ಸ್ನೇಹಿತ ಪೊಲೀಸ್​ ವಶಕ್ಕೆ

    ಕೊಚ್ಚಿ: ಕೇರಳದ ಮೂಲದ ಯುವತಿಯೊಬ್ಬಳು ಮೈಸೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಮೃತ ಯುವತಿಯನ್ನು ಸಬಿನಾ (30) ಎಂದು ಗುರುತಿಸಲಾಗಿದೆ. ಈಕೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಳು. ತಾನು ಉಳಿದುಕೊಂಡಿದ್ದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ದೇಹದ ಮೇಲೆ ಗಾಯದ ಕಲೆಗಳಿರುವ ಹಿನ್ನೆಲೆಯಲ್ಲಿ ಕರುವನ್ನೂರು ಮೂಲದ ಆಕೆಯ ಸ್ನೇಹಿತ ಸುಹಾಸ್​ ಎಂಬಾತನನ್ನು ಸಬಿನಾ ಸಂಬಂಧಿಕರ ದೂರಿನ ಆಧಾರದ ಮೇಲೆ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ​

    ಇದನ್ನೂ ಓದಿ: ವಾಹನ ಸಂಚರಿಸದಿದ್ದರೂ ಹಣ ಕಟ್ ಬೆಂ-ಮೈ ದಶಪಥ ಹೆದ್ದಾರಿ ಟೋಲ್‌ಪ್ಲಾಜಾದಲ್ಲಿ ತಾಂತ್ರಿಕ ಸಮಸ್ಯೆ ವಾಹನ ಸವಾರರಿಗೆ ಕಿರಿಕಿರಿ

    ಸುಹಾಸ್​ ಜತೆ ನಡೆದ ಜಗಳದ ಸಮಯದಲ್ಲಿ ಸಬಿನಾ ಸಾವು ಸಂಭವಿಸಿರಬಹುದು ಎಂದು ಸಬಿನಾ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಮೈಸೂರಿನಲ್ಲಿ ಖಾಸಗಿ ಮೊಬೈಲ್​ ಕಂಪನಿಯಲ್ಲಿ ಸಬಿನಾ ಕೆಲಸ ಮಾಡುತ್ತಿದ್ದಳು. ನಮಗೆ ಪ್ರತಿದಿನ ಕರೆ ಮಾಡುತ್ತಿರಲಿಲ್ಲ, ಅಪರೂಪಕ್ಕೆ ಒಮ್ಮೆ ಕರೆ ಮಾಡುತ್ತಿದ್ದಳು ಎಂದು ಪಾಲಕರು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸಬಿನಾ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಪ್ರಕರಣ ಸಂಬಂಧ ಪೊಲೀಸ್​ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಯಾವ ರಾಜ್ಯದಲ್ಲಿ ಎಷ್ಟಿವೆ ಹುಲಿಗಳು?; ಪ್ರಧಾನಿ ಮೋದಿ ಅವರಿಂದ ಏ.​ 9ರಂದು ಮೈಸೂರಿನಲ್ಲಿ ಅಂಕಿಅಂಶ ಬಿಡುಗಡೆ

    ರಾಹುಲ್​ ಗಾಂಧಿ ಅನರ್ಹತೆ: ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಹಳೇ ಟ್ವೀಟ್ ವೈರಲ್​

    ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಏ.​ 5ಕ್ಕೆ ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts