More

    ಯಾವ ರಾಜ್ಯದಲ್ಲಿ ಎಷ್ಟಿವೆ ಹುಲಿಗಳು?; ಪ್ರಧಾನಿ ಮೋದಿ ಅವರಿಂದ ಏ.​ 9ರಂದು ಮೈಸೂರಿನಲ್ಲಿ ಅಂಕಿಅಂಶ ಬಿಡುಗಡೆ

    ದೆಹಲಿ: ಏಪ್ರಿಲ್​ 9ರಂದು ಮೈಸೂರಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಹುಲಿ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಲಿದ್ದು ನೂತನ ಹುಲಿ ಗಣತಿಯ ಅಂಕಿ ಆಂಶಗಳನ್ನ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

    ಭಾರತ ಸರ್ಕಾರ ಪ್ರಾರಂಭಿಸಿದ ಮಿಷನ್​ ಟೈಗರ್​ ಅಭಿಯಾನಕ್ಕೆ 50ವರ್ಷಗಳು ತುಂಬಲಿದ್ದು ಕಾಂಬೋಡಿಯಾಕ್ಕೆ ನೀಡಲಾಗಿದ್ದ ಹುಲಿಗಳನ್ನ ಮರುಪರಿಚಯಿಸಲಾಗುವುದು. ಹಾಲಿ 3,000 ಸಾವಿರ ಹುಲಿಗಳ ಸಂಖ್ಯೆಯೊಂದಿಗೆ ಭಾರತವು ಶೇ.70ಕ್ಕಿಂತ ಅಧಿಕ ಜಾಗತಿಕ ಹುಲಿ ಸಂತತಿ ಹೊಂದಿದೆ. 2006-18ರ ನಡುವಿನ 12 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣವಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(NTCA)ದ ಪ್ರಧಾನ ಕಾರ್ಯದರ್ಶಿ ಎಸ್.​​ಪಿ.ಯಾದವ್​ ಕಾಂಬೋಡಿಯಾದಲ್ಲಿ ಬೇಟೆಯಾಡುವಿಕೆ ಸೇರಿದಂತೆ ಇತರೆ ಕಾರಣಗಳಿಂದ ಹುಲಿಗಳ ಸಂತತಿ ಕಡಿಮೆಯಿದ್ದು 2009ರಲ್ಲಿ ಭಾರತ-ಕಾಂಬೋಡಿಯಾ ನಡುವಿನ ಒಪ್ಪಂದದ ಪ್ರಕಾರ ಹುಲಿಗಳನ್ನ ಕಳಿಸಿಕೊಡಲಾಗಿತ್ತು. ಕಾಂಬೋಡಿಯಾದಲ್ಲಿ ಹುಲಿಗಳ ಮರುಪರಿಚಯಿಸುವ ಸಲುವಾಗಿ ಉಭಯ ದೇಶದ ಅಧಿಕಾರಿಗಳು ನಿಯೋಗ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದು ನಮ್ಮ ದೇಶದ ಹುಲಿಗಳನ್ನ ಮರುಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.

    ಯಾವ ರಾಜ್ಯದಲ್ಲಿ ಎಷ್ಟಿವೆ ಹುಲಿಗಳು?; ಪ್ರಧಾನಿ ಮೋದಿ ಅವರಿಂದ ಏ.​ 9ರಂದು ಮೈಸೂರಿನಲ್ಲಿ ಅಂಕಿಅಂಶ ಬಿಡುಗಡೆ

    ನಾವು ಅಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಕಡಿತವಾಗುತ್ತಿರುವ ಕುರಿತು ಅವಲೋಕಿಸಬೇಕಿದೆ. ಒಂದು ವೇಳೆ ಕಾಂಬೋಡಿಯಾ ಸರ್ಕಾರವು ಹುಲಿ ಕಾರಿಡಾರ್​, ಪ್ಯಾಟ್ರೋಲಿಂಗ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಜಾರಿಗೊಳಿಸಿದ್ದಲ್ಲಿ ನಾವು ಮುಂದುವರೆಯುತ್ತೇವೆ. ಉಭಯ ರಾಷ್ಟ್ರಗಳು ಅಂತರಾಷ್ಟ್ರೀಯ ಪರಿಸರ ಸಂರಕ್ಷಣೆ(IUCN) ನಿಯಮಾವಳಿಗಳ ಪ್ರಕಾರ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಮೈಸೂರಿನಲ್ಲಿ ಏಪ್ರಿಲ್​ 9ರಿಂದ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ಹುಲಿ ಸಂರಕ್ಷಣೆಗೆ ರಾಜಕೀಯ ಹಾಗೂ ಸಾರ್ವಜನಿಕರ ಬೆಂಬಲವನ್ನ ಕೋರಿ ಸುವರ್ಣ ಮಹೋತ್ಸವದ ಪ್ರಯುಕ್ತ 50ರೂಪಾಯಿ ಮುಖಬೆಲೆಯ ಹೊಸ ನಾಣ್ಯವನ್ನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

    1973ಏಪ್ರಿಲ್​​ 1ರಂದು ಭಾರತ ಸರ್ಕಾರವು ದೇಶಾದ್ಯಂತ ಸುಮಾರು 18,,278sqಕಿಲೋಮೀಟರ್​ ವ್ಯಾಪ್ತಿಯಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಶುರುವಾದ ಯೋಜನೆಯೂ ಇಂದು 53 ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ 75,000sqಕಿಲೋಮೀಟರ್ ವ್ಯಾಪ್ತಿಗೆ ವಿಸ್ತರಿಸಿದೆ ಎಂದು ಎಸ್​.ಪಿ.ಯಾದವ್​ ತಿಳಿಸಿದ್ದಾರೆ.

    ಇದನ್ನೂ ಓದಿ: ದಾವಣಗೆರೆಯಲ್ಲಿ ನರೇಂದ್ರ ಮೋದಿ ರೋಡ್ ಶೋ; ಪ್ರಧಾನಿಗೆ ಬಿಎಸ್​ವೈ, ಬೊಮ್ಮಾಯಿ ಸಾಥ್

    ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಏ.​ 5ಕ್ಕೆ ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts