ಐಪಿಒ ನಿಯಮ ಬಿಗಿಗೊಳಿಸಿದ ಸೆಬಿ; ವಿವಿಧ ನಿಯಮಗಳ ತಿದ್ದುಪಡಿಯ ಪ್ರಸ್ತಾವನೆ ಅಂಗೀಕಾರ

Sebi
Published on

ಮುಂಬೈ: ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಪ್ರಕ್ರಿಯೆ ಸಂಬಂಧಿತ ನಿಯಮವನ್ನು ಬಿಗಿಗೊಳಿಸಿರುವ ಸೆಕ್ಯುರಿಟೀಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವಿವಿಧ ನಿಯಮಗಳ ತಿದ್ದುಪಡಿಯ ಪ್ರಸ್ತಾವನೆಯನ್ನು ಮಂಗಳವಾರ ಅಂಗೀಕರಿಸಿದೆ.

ಇದರ ಪ್ರಕಾರ, ಐಪಿಒ ಮೂಲಕ ಹೂಡಿಕೆ ಪಡೆಯುವ ಸಂದರ್ಭದಲ್ಲಿ ಅಕ್ವಿಸಿಷನ್ ಟಾರ್ಗೆಟ್ ಎಷ್ಟು ಎಂಬುದನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಇನ್ನೊಂದೆಡೆ, ಲಿಸ್ಟೆಡ್ ಕಂಪನಿಗಳಿಗೆ ಅನ್ವಯವಾಗುವಂತೆ ನಿರ್ದೇಶಕ ಸ್ಥಾನಕ್ಕೆ ಚುನಾಯಿತರಾಗಲು ವಿಫಲರಾದವರನ್ನು ನೇಮಕ ಅಥವಾ ಮರುನೇಮಕ ಮಾಡುವುದಕ್ಕೆ ವಿಶೇಷವಾಗಿ ಪೂರ್ಣಾವಧಿ ನಿರ್ದೇಶಕ ಅಥವಾ ಮ್ಯಾನೇಜಿಂಗ್ ಡೈರೆಕ್ಟರ್ ಅಥವಾ ಪ್ರಬಂಧಕರಾಗಿ ಜನರಲ್ ಮೀಟಿಂಗ್​ನಲ್ಲಿ ನೇಮಕ ಮಾಡುವ ತಿದ್ದುಪಡಿ ಅಂಶವೂ ಇದರಲ್ಲಿದೆ. ಫಾರಿನ್ ಪೋರ್ಟ್​ಫೋಲಿಯೊ ಹೂಡಿಕೆದಾರರು, ಆಲ್ಟರ್​ನೇಟಿವ್ ಇನ್​ವೆಸ್ಟ್​ಮೆಂಟ್ ಫಂಡ್ಸ್ (ಎಐಎಫ್), ಮ್ಯೂಚುವಲ್ ಫಂಡ್, ಸೆಟಲ್​ವೆುಂಟ್ ಪ್ರೊಸೀಡಿಂಗ್ಸ್ ಮತ್ತು ಇತರೆ ಅಂಶಗಳ ಪ್ರಸ್ತಾವನೆಯನ್ನೂ ಸೆಬಿ ಅಂಗೀಕರಿಸಿದೆ. ಇದರಂತೆ, ಮ್ಯೂಚುವಲ್ ಫಂಡ್ ಸ್ಕೀಮ್ ರದ್ದುಗೊಳಿಸುವ ಮೊದಲು ಯೂನಿಟ್ ಹೋಲ್ಡರ್​ಗಳ ಅನುಮತಿಯನ್ನು ಮ್ಯೂಚುವಲ್ ಫಂಡ್ ಕಂಪನಿಗಳು ಪಡೆಯಬೇಕು.

ಸೆನ್ಸೆಕ್ಸ್, ನಿಫ್ಟಿ ಏರಿಕೆ: ಜಾಗತಿಕ ವಿದ್ಯಮಾನಗಳಿಗೆ ಅನುಗುಣವಾಗಿ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಮಂಗಳವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 477.24 ಅಂಶ (0.83%) ಏರಿ 57,897.48 ಅಂಶ, ನಿಫ್ಟಿ 147.20 ಅಂಶ (0.86%) ಏರಿ 17,233.45 ಅಂಶ ತಲುಪಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಏಷ್ಯನ್ ಪೇಂಟ್ಸ್ ಶೇಕಡ 3 ಏರಿದರೆ, ಸನ್ ಫಾರ್ವ, ಎಂಆಂಡ್​ಎಂ, ಎನ್​ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಟೈಟಾನ್ ಲಾಭದ ವಹಿವಾಟು ನಡೆಸಿದವು. ಇಂಡಸ್​ಇಂಡ್ ಬ್ಯಾಂಕ್, ಪವರ್​ಗ್ರಿಡ್ ಷೇರುಗಳು ನಷ್ಟ ಅನುಭವಿಸಿವೆ. ಚಿನ್ನ,ಬೆಳ್ಳಿ ಹೆಚ್ಚಳ: ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10ಗ್ರಾಮಿಗೆ 80 ರೂ. ಹೆಚ್ಚಳವಾಗಿ 47,233 ರೂ. ಬೆಳ್ಳಿಯ ದರ ಒಂದು ಕಿಲೋಗೆ 580 ರೂಪಾಯಿ ಹೆಚ್ಚಾಗಿ 61,266 ರೂಪಾಯಿ ಆಗಿದೆ.

ಎನ್​ಪಿಎ ಇಳಿಕೆ: ಷೆಡ್ಯೂಲ್ಡ್ ವಾಣಿಜ್ಯ ಬಾಂಕುಗಳ ಒಟ್ಟು ಎನ್​ಪಿಎ ಪ್ರಮಾಣ 2020ರ ಮಾರ್ಚ್ ಅಂತ್ಯಕ್ಕೆ ಶೇಕಡ 8.2 ಇದ್ದದ್ದು, 2021ರ ಸೆಪ್ಟೆಂಬರ್ ಅಂತ್ಯಕ್ಕೆ ಶೇಕಡ 6.9ಕ್ಕೆ ಇಳಿಕೆಯಾಗಿದೆ ಎಂದು ಆರ್​ಬಿಐ ಪ್ರಕಟಿಸಿದ ಹೊಸ ವರದಿ ಹೇಳಿದೆ.

ಕ್ರಿಪ್ಟೋ ನಿಷೇಧ ತಡವಾಯ್ತು: ಬಿಟ್​ಕಾಯಿನ್ ಚಾಲ್ತಿಗೆ ಬಂದು ನಾಲ್ಕು ವರ್ಷದ ನಂತರ ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ ಸಂಬಂಧಿಸಿ ಭಾರತೀಯರನ್ನು ಎಚ್ಚರಿಸುವ ಸಂದೇಶವನ್ನು ಆರ್​ಬಿಐ ಪ್ರಕಟಿಸಿತ್ತು. ಎಂಟು ವರ್ಷಗಳ ನಂತರ ಕ್ರಿಪ್ಟೋಕರೆನ್ಸಿಯನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಶಿಫಾರಸನ್ನು ಮಾಡಿದೆ. ಆದರೆ, ಈಗಾಗಲೇ ಈ ವಿಚಾರ ಕೈಮೀರಿ ಹೋಗಿದ್ದು, ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದು ಪರಿಣತರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net