ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭ ಉದ್ಘಾಟಿಸಿ ಬಹುಮಾನ ವಿತರಿಸಿದ ವಿಧಾನಸಭಾ ಸ್ಪೀಕರ್ ಡಾ.ಯು.ಟಿ.ಖಾದರ್ ಫರೀದ್, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದರೊಂದಿಗೆ ತಮ್ಮ ತಮ್ಮ ಕುಟುಂಬಕ್ಕೆ ದಾರಿದೀಪವಾಗಿ ದೇಶಕ್ಕೂ ಕೊಡುಗೆ ನೀಡಲಿ, ಎಂದು ಹಾರೈಸಿದರು. ಬಹುಮಾನ ಸಿಗದವರು ಪರಾಭವವನ್ನೇ ಮೆಟ್ಟಿಲನ್ನಾಗಿಸಿಕೊಂಡು ಯಶಸ್ಸಿನತ್ತ ಮುನ್ನುಗ್ಗಿ ಎಂದರು.