ಸೆಪ್ಟೆಂಬರ್ 18 ಮತ್ತು 19ಕ್ಕೆ ಎಸ್‌ಡಿಎ ಪರೀಕ್ಷೆ

exam
Published on

ಬೆಂಗಳೂರು: ಕರೊನಾದಿಂದ ಮುಂದೂಡಿದ್ದ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಪರೀಕ್ಷೆಯ ದಿನಾಂಕವನ್ನು

ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ. ಆ ಪ್ರಕಾರವಾಗಿ ಸೆ.18 ಮತ್ತು 19ರಂದು ಪರೀಕ್ಷೆ ನಡೆಸಲು ನಿರ್ಧರಿಸಿದೆ.

ರಾಜ್ಯದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕ /ಕಿರಿಯ ಸಹಾಯಕರು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಪರೀಕ್ಷೆಯನ್ನು ಮಾರ್ಚ್ 20 ಮತ್ತು 21ರಂದು ನಡೆಸಲು ಉದ್ದೇಶಿಸಲಾಗಿತ್ತು. ಕರೊನಾ ಕಾರಣದಿಂದಾಗಿ ಆನಂತರದಲ್ಲಿ ಮುಂದೂಡಲಾಗಿತ್ತು.

ಇದೀಗ ಸೆ.18ರಂದು ಕನ್ನಡ ಭಾಷಾ ಪರೀಕ್ಷೆ, ಸೆ.19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಮರು ದಿನಾಂಕ ನಿಗದಿ ಪಡಿಸಿದೆ. ಹೆಚ್ಚಿನ ಮಾಹಿತಿಗೆ ಅಯೋಗದ ವೆಬ್‌ಸೈಟ್ http://www.kpsc.kar.nic.in ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net