ಸ್ವಉದ್ಯೋಗ ಪ್ರೋತ್ಸಾಹಿಸಲು ಯೋಜನೆ

IMG-20231107-WA0155
ಹನಗೋಡು ಹೋಬಳಿಯ ವದ್ಲಿಮನುಗನಹಳ್ಳಿ ಗ್ರಾಮದ 15 ಮಹಿಳೆಯರಿಗೆ ಜೆಡಿಎಸ್ ಮುಖಂಡ ಹರವೆ ಶ್ರೀಧರ್ ಕೊಡುಗೆಯಾಗಿ ನೀಡಿದ ಹೊಲಿಗೆ ಯಂತ್ರಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ವಿತರಿಸಿದರು. ರಂಜಿತಾ ಚಿಕ್ಕಮಾದು ಇದ್ದರು.
Published on

ಹನಗೋಡು: ಹುಣಸೂರು ತಾಲೂಕಿನ ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆಯುವ ಮೂಲಕ ಸ್ವಾವಲಂಬಿಗಳಾಗಿ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.

ಹನಗೋಡು ಹೋಬಳಿಯ ವದ್ಲಿಮನುಗನಹಳ್ಳಿ ಗ್ರಾಮದಲ್ಲಿ 15 ಮಹಿಳೆಯರಿಗೆ ಜೆಡಿಎಸ್ ಮುಖಂಡ ಹರವೆ ಶ್ರೀಧರ್ ಕೊಡುಗೆಯಾಗಿ ನೀಡಿದ ಉಚಿತ ಹೊಲಿಗೆ ಯಂತ್ರಗಳನ್ನು ಮಂಗಳವಾರ ವಿತರಿಸಿ ಮಾತನಾಡಿದರು. ಮುಂದೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ, ಯುವಕರಿಗೆ ಮೊಬೈಲ್, ಟಿ.ವಿ.ರಿಪೇರಿ ಸೇರಿದಂತೆ ಇತರ ತರಬೇತಿಗಳನ್ನು ನೀಡುವ ಮೂಲಕ ಸ್ವ ಉದ್ಯೋಗ ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಜೆಡಿಎಸ್ ಮುಖಂಡ ಹರವೆ ಶ್ರೀಧರ್, ರಂಜಿತಾ ಚಿಕ್ಕಮಾದು, ತಾಪಂ ಮಾಜಿ ಸದಸ್ಯ ತಟ್ಟೆಕೆರೆ ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್, ಡೇರಿ ಆನಂದ್, ಗ್ರಾಮದ ಮುಖಂಡರಾದ ರಮೇಶ, ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net