ಬಾಲಾಪರಾಧಿ ಗೃಹದಲ್ಲಿ ದೃಷ್ಕೃತ್ಯ: 6 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ!

Untitled design - 2025-10-13T110147.053
Published on

6 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೈದರಾಬಾದ್‌ನ ಬಾಲಾಪರಾಧಿ ಗೃಹವೊಂದರ ಮೇಲ್ವಿಚಾರಕನನ್ನು(Supervisor) ಸೋಮವಾರ ಬಂಧಿಸಲಾಗಿದೆ.

ಸೈದಾಬಾದ್ ಬಾಲಾಪರಾಧಿ ಗೃಹದಲ್ಲಿರುವ 10 ವರ್ಷದ ಬಾಲಕನೊಬ್ಬ ತನ್ನ ತಾಯಿ ಹತ್ತಿರ ಈ ಕೆಟ್ಟ ಅನುಭವವನ್ನು ಹೇಳಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆಕೆ ಘಟನೆ ಬಗ್ಗೆ ಪೊಲೀಸರಿಗೆ ಹೇಳಿದ ಬಳಿಕ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆಯಲ್ಲಿ ಮೇಲ್ವಿಚಾರಕನು ಇನ್ನೂ 5 ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ.

"ಹುಡುಗ ದಸರಾ ರಜೆಗೆ ಮನೆಗೆ ಹೋಗಿದ್ದ ಮತ್ತು ನಂತರ ಹಿಂತಿರುಗಲು ಹೆದರುತ್ತಿದ್ದ. ನಂತರ ಅವನು ತನ್ನ ತಾಯಿಗೆ ಕೇಳಿದಾಗ ಈ ವಿಷಯದ ಬಗ್ಗೆ ಹೇಳಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net