

Sexual harassment : ದಿನಕೂಲಿ ಕಾರ್ಮಿಕನೊಬ್ಬ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಕೊಂದು ಭತ್ತದ ಗದ್ದೆಯಲ್ಲಿ ಹೂತು ಹಾಕಿರುವ ಘಟನೆ ತ್ರಿಪುರಾದ ಪಾಣಿಸಾಗರ್ನಲ್ಲಿ ಭಾನುವಾರ (ಅ.12) ನಡೆದಿದೆ.
ಆರೋಪಿಯು ವಾಯು ವಿಹಾರಕ್ಕೆ ಹೋಗುವ ನೆಪಹೇಳಿ ಮಗುವನ್ನು ಆಕೆಯ ತಾಯಿಯಿಂದ ಕರೆದುಕೊಂಡು ಹೋಗಿದ್ದಾನೆ. ಈ ಬಳಿಕ ಮೂರು ಗಂಟೆ ನಂತರವೂ ಮಗು ಮನೆಗೆ ಬಾರದ ಕಾರಣ ಹುಡುಗಿಯ ತಾಯಿ ಗಾಬರಿಕೊಂಡು ಗ್ರಾಮಸ್ಥರ ಸಹಾಯ ಪಡೆದು ಹುಡುಕಲು ಪ್ರಾರಂಭಿಸಿದ್ದಾರೆ.
ಇದಾದ ಬಳಿಕ ಮಗುವಿನ ಶವವು ಭತ್ತದ ಗದ್ದೆಯಲ್ಲಿ ಹೂತಿರುವುದರ ರೀತಿಯಲ್ಲಿ ಕಂಡುಬಂದಿದ್ದು, ಅದನ್ನು ಗಮನಿಸಿದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮಗುವಿನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಪಾಣಿಸಾಗರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುಮಂತ ಭಟ್ಟಾಚಾರ್ಜಿ ಮಾತನಾಡಿದ್ದು, ಈಗಾಗಲೇ ಆರೋಪಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದು ಆತನನ್ನು ಅಸ್ಸಾಂನ ನೀಲಂಬಜಾರ್ನಲ್ಲಿ ಬಂಧಿಸಿದ್ದು, ಆರೋಪಿ ವಿರುದ್ಧ ಕಾನೂನಿನ ಸಂಬಂಧಿತ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಇದೇ ತಿಂಗಳ ಶುಕ್ರವಾರ (ಅ.10) ನಡೆದ ಮತ್ತೊಂದು ಘಟನೆಯಲ್ಲಿ, ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ದ್ವಿತೀಯ ವರ್ಷದ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿಯನ್ನು ಕಾಲೇಜಿನ ಕ್ಯಾಂಪಸ್ ಹೊರಗೆ ಸಾಮೂಹಿಕ ಅತ್ಯಾಚಾರ ನಡೆಸಿ ಕಾಡಿನೊಳಗೆ ಬಿಟ್ಟು ಹೋಗಿರುವ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. (ಏಜೆನ್ಸೀಸ್)