ಟಿಎಂ ಕೃಷ್ಣರನ್ನು ಎಂ.ಎಸ್​. ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತರು ಎಂದು ಗುರುತಿಸುವಂತಿಲ್ಲ: ಸುಪ್ರೀಂ ಕೋರ್ಟ್​

ವಿಜಯವಾಣಿ - 2024-12-16T200805.879
Published on

ನವದೆಹಲಿ: ಗಾಯಕ ಟಿ.ಎಂ. ಕೃಷ್ಣರನ್ನು ಸಂಗೀತ ಕಲಾನಿಧಿ, ದಿವಗಂತ ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿಗೆ ಭಾಜನರಾಗದಂತೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.16) ಆದೇಶ ಹೊರಡಿಸಿದೆ. ಭಾನುವಾರ ಕೃಷ್ಣ ಅವರಿಗೆ ಸುಬ್ಬಲಕ್ಷ್ಮಿ ಪ್ರಶಸ್ತಿ ನೀಡಿದ್ದನ್ನು ವಿರೋಧಿಸಿದ ಖ್ಯಾತ ಗಾಯಕಿ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್. ಕೃಷ್ಣ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ಇಂದು ಮಧ್ಯಂತರ ಆದೇಶ ಹೊರಡಿಸಿದೆ.

ಸಂಗೀತ ದಿಗ್ಗಜರ ಬಗ್ಗೆ ಕೃಷ್ಣ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಅವರಿಗೆ ಎಂ.ಎಸ್​. ಸುಬ್ಬುಲಕ್ಷ್ಮಿ ಪ್ರಶಸ್ತಿ ನೀಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇನೆ. ಹೀಗಾಗಿ ಅಜ್ಜಿಯ ಹೆಸರಲ್ಲಿ ಕೃಷ್ಣಾಗೆ ಪ್ರಶಸ್ತಿ ಕೊಡುವುದು ಬೇಡ ಎಂದು ವಿ.ಶ್ರೀನಿವಾಸನ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್​ನ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರಿದ್ದ ದ್ವಿಸದಸ್ಯ ಪೀಠವು, ಈ ಗೌರವಕ್ಕೆ ಕೃಷ್ಣ ಅನರ್ಹರು. ಹೀಗಾಗಿ ಅವರನ್ನು ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತರು ಎಂದು ಗುರುತಿಸುವಂತಿಲ್ಲ ಎಂದು ಹೇಳಿದೆ.

ಈಗಾಗಲೇ ಕೃಷ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆದ ಕಾರಣ ಅವರನ್ನು ಸಂಗೀತ ಪಂಡಿತೆ ಎಂ.ಎಸ್​. ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತರು ಎಂದು ಗುರುತಿಸುವುದು ಬೇಡ ಎಂದು ನ್ಯಾಯಾಲಯದ​ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net