

ನವದೆಹಲಿ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಿಸಿರುವ ಕಾರಣ ಏಪ್ರಿಲ್ 19ರಂದು ನಿಗದಿಯಾಗಿದ್ದ ಎಸ್ಬಿಐ ಜೂನಿಯರ್ ಅಸೋಸಿಯೇಟ್ಸ್ ಮೇನ್ ಪರೀಕ್ಷೆಯನ್ನು ಮುಂದೂಡಿರುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ.
ರಾಷ್ಟ್ರಾದ್ಯಂತ 8 ಸಾವಿರ ಜೂನಿಯರ್ ಅಸೋಸಿಯೇಟ್ ಅಥವಾ ಕ್ಲರ್ಕ್ ಹುದ್ದೆಯ ಭರ್ತಿಗಾಗಿ ಎಸ್ಬಿಐ ಪರೀಕ್ಷೆಗಳನ್ನು ಏರ್ಪಡಿಸಿತ್ತು. ಈಗಾಗಲೆ ಪ್ರಿಲಿಮಿನರಿ ಪರೀಕ್ಷೆ ಮುಗಿದಿದ್ದು, ಮೇನ್ ಪರೀಕ್ಷೆ ಏಪ್ರಿಲ್ 19ರಂದು ನಿಗದಿಯಾಗಿತ್ತು.
ಎಸ್ಬಿಐ ಜೂನಿಯರ್ ಅಸೋಸಿಯೇಟ್ಸ್ನ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಮೇನ್ ಪರೀಕ್ಷೆಯನ್ನು ಶೀಘ್ರದಲ್ಲೇ ಮರುನಿಗದಿಗೊಳಿಸಿ, ಮಾಹಿತಿ ನೀಡುವುದಾಗಿ ತಿಳಿಸಿದೆ.