More

    339 ಅರಣ್ಯ ರಕ್ಷಕ ಹುದ್ದೆಗಳಿಗೆ ಮೇ 15ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ

    ಬೆಂಗಳೂರು: ಕರ್ನಾಟಕದ 11 ಅರಣ್ಯ ವೃತ್ತಗಳಲ್ಲಿ 339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್15ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ದೇಶಾದ್ಯಂತ ಲಾಕ್​ಡೌನ್ಹಿನ್ನೆಲೆ ಆಸಕ್ತರಿಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸುವಲ್ಲಿ ಉಂಟಾಗುತ್ತಿರುವ ತೊಂದರೆಯನ್ನು ಪರಿಗಣಿಸಿ ಇನ್ನಷ್ಟು ಅವಧಿಯನ್ನು ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅದರಂತೆ, ಮೇ 15ರವರೆಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ. ಜತೆಗೆ, ಶುಲ್ಕ ಪಾವತಿಸಲು ಮೇ 18ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.

    ಯಾರೆಲ್ಲ ಅರ್ಜಿ ಸಲ್ಲಿಸಬಹುದುಅರಣ್ಯ ರಕ್ಷಕ ಹುದ್ದೆಗಳಿಗೆ ಕಳೆದ ಮಾರ್ಚ್16ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗಿತ್ತು. ದ್ವಿತೀಯ ಪಿಯುಸಿ,12 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಎಸ್‌ಸಿ, ಎಸ್‌ಟಿ, ಪ್ರವರ್ಗ1 ರ ಅಭ್ಯರ್ಥಿಗಳಿಗೆ 32 ವರ್ಷ, ಪ್ರವರ್ಗ 2, 2ಬಿ, 3, 3ಬಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಏಲ್ಲೆಲ್ಲಿವೆ ಉದ್ಯೋಗಾವಕಾಶಬೆಂಗಳೂರು, ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಧಾರವಾಡ, ಹಾಸನ, ಕೆನರಾ, ಮಂಗಳೂರು, ಮೈಸೂರು ಹಾಗೂ ಶಿವಮೊಗ್ಗ ಅರಣ್ಯ ವೃತ್ತಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

    ಅಭ್ಯರ್ಥಿಯು ಈ 11 ವೃತ್ತಗಳಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಮಾತ್ರ ಆಯ್ಕೆ ಬಯಸಿ ಅರ್ಜಿ ಸಲ್ಲಿಸಬಹುದು. ಒಟ್ಟು 339 ಹುದ್ದೆಗಳಲ್ಲಿ 12 ಬ್ಯಾಕ್‌ಲಾಗ್ ಹುದ್ದೆಗಳಾಗಿವೆ.

    ವೇತನಶ್ರೇಣಿ: 21,400 ರೂ. ದಿಂದ 42,000 ಇರುತ್ತದೆ.

    ಆಯ್ಕೆ ವಿಧಾನ: ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಮೆರಿಟ್ ಆಧಾರದ ಮೇಲೆ ಮೀಸಲಾತಿ ಪ್ರವರ್ಗವಾರು, ವೃತ್ತವಾರು ಅಧಿಸೂಚಿಸಿರುವ ಹುದ್ದೆಗಳಿಗೆ 1:20 (ಹುದ್ದೆ : ಅಭ್ಯರ್ಥಿ), ಅನುಪಾತದಲ್ಲಿ ದೇಹದಾರ್ಢ್ಯತೆ, ದೈಹಿಕ ಸಹಿಷ್ಣುತೆ, ದೈಹಿಕ ಕಾರ್ಯಕ್ಷಮತೆ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಅರ್ಹರಾದ ಅಭ್ಯರ್ಥಿಗಳು ಮುಂದಿನ ಹಂತದ ಲಿಖಿತ ಅಪ್ಟಿಟ್ಯೂಡ್ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.

    ಅರಣ್ಯ ರಕ್ಷಕ ಹುದ್ದೆಗೆ ಲಿಖಿತ ಅಪ್ಟಿಟ್ಯೂಡ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಈ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಮಟ್ಟದಲ್ಲಿದ್ದು, ಬಹು ಆಯ್ಕೆ ಮಾದರಿಯ ಹಾಗೂ 100 ಪ್ರಶ್ನೆಗಳು ಹಾಗೂ 100 ಅಂಕಗಳದ್ದಾಗಿರುತ್ತದೆ. ಪರೀಕ್ಷಾ ಅವಧಿ 2 ಗಂಟೆ ಆಗಿರುತ್ತದೆ.

    ಲಿಖಿತ ಪರೀಕ್ಷಾ ಕೇಂದ್ರ: ಲಿಖಿತ ಅಪ್ಟಿಟ್ಯೂಡ್ ಪರೀಕ್ಷೆಗಳನ್ನು ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಅಧಿಸೂಚಿಸಲ್ಪಟ್ಟ ವೃತ್ತಗಳ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಬೆಳಗಾವಿ, ಬೆಂಗಳೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಧಾರವಾಡ, ಹಾಸನ, ಕೆನರಾ (ಶಿರಸಿ), ಮಂಗಳೂರು, ಮೈಸೂರು, ಶಿವಮೊಗ್ಗಲಿಖಿತ ಪರೀಕ್ಷೆಯ ವಿಷಯಗಳು: ಗಣಿತ (40 ಅಂಕಗಳು), ಸಾಮಾನ್ಯ ಜ್ಞಾನ (60 ಅಂಕಗಳು).

    ಅರ್ಜಿ ಸಲ್ಲಿಕೆ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು http://www.forestapp-kar.com/fg2020/new_registration.php ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

    7, 8ನೇ ಕ್ಲಾಸ್​ಗೆ ಪರೀಕ್ಷೆ ಇರಲ್ಲ, ಏಪ್ರಿಲ್​ 14ರ ನಂತರ ಎಸ್​ಎಸ್ಎಲ್ಸಿ ವೇಳಾಪಟ್ಟಿ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts