ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ದರೋಡೆಗೆ ಯತ್ನ

SBI Hirekotnekal
Published on

ರಾಯಚೂರು: ದೇಶದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ದರೋಡೆ ಮಾಡಲು ಯತ್ನಿಸಿದ ಕಳ್ಳರ ಪೈಕಿ ಒಬ್ಬ ಪೊಲೀಸರ ಬಲೆಗೆ ಬಿದ್ದ ಘಟನೆ ನಿನ್ನ ರಾತ್ರಿ ನಡೆದಿದೆ.

ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ನಲ್ಲಿರುವ ಎಸ್​ಬಿಐ ಶಾಖೆಯಲ್ಲಿ ದರೋಡೆ ಪ್ರಯತ್ನ ನಡೆದಿತ್ತು. ನಿನ್ನೆ ರಾತ್ರಿ ಬ್ಯಾಂಕಿನ ಹೊರಗೆ ಇದ್ದ ಸಿಸಿ ಕ್ಯಾಮೆರಾವನ್ನು ಜಖಂಗೊಳಿಸಿ, ಮುಖ್ಯ ಬಾಗಿಲನ್ನೇ ಮುರಿದು ಒಳಕ್ಕೆ ಪ್ರವೇಶಿಸಿದ್ದರು ಮೂವರು ಕಳ್ಳರು. ಇದೇ ವೇಳೆ, ಗಸ್ತು ಬಂದ ಪೊಲೀಸರಿಗೆ ಬ್ಯಾಂಕ್ ಬಾಗಿಲು ತೆರೆದಿರುವುದು ಕಂಡ ಕಾರಣ ಅವರೂ ಒಳಪ್ರವೇಶಿಸಿದ್ದಾರೆ.

ಅನಿರೀಕ್ಷಿತವಾಗಿ ಬಂದ ಪೊಲೀಸರನ್ನು ನೋಡಿ ಹೌಹಾರಿದ ಕಳ್ಳರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗೆಲೆತ್ನಿಸಿದ್ದಾರೆ. ಪೊಲೀಸರು ಬೆನ್ನಟ್ಟಿದಾಗ ಒಬ್ಬ ಕಳ್ಳ ಸಿಕ್ಕಿಬಿದಿದ್ದಾನೆ. ಆತನ ಪರಿಚಯವನ್ನು ಇನ್ನೂ ಬಹಿರಂಗಪಡಿಸಿಲ್ಲ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net