ಬಡ್ಡಿ ದರ ಇಳಿಸಿದ ಎಸ್​ಬಿಐ, ಬಿಒಎಂ

ವಿಜಯವಾಣಿ (4)
Published on

ನವದೆಹಲಿ: ಆರ್​ಬಿಐ ಇತ್ತೀಚೆಗೆ ಬಡ್ಡಿ ದರ ಇಳಿಸಿದ್ದನ್ನು ಅನುಸರಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಸಾಲದ ಬಡ್ಡಿ ದರವನ್ನು ಶೇ. 0.25ರಷ್ಟು (25 ಮೂಲಾಂಶ) ಇಳಿಕೆ ಮಾಡಿದೆ. ಇದರಿಂದಾಗಿ ರೆಪೊಗೆ ಜೋಡಣೆಯಾದ ಸಾಲದ ಬಡ್ಡಿ ದರ ಶೇ. 8.25ಕ್ಕೆ ಇಳಿಯಲಿದೆ.

ಹೊಸದಾಗಿ ಸಾಲ ಪಡೆಯುವವರಿಗೆ ಮತ್ತು ಈಗಾಗಲೇ ಸಾಲ ಪಡೆದವರು ಇಬ್ಬರಿಗೂ ಇದು ಅನ್ವಯವಾಗಲಿದೆ. ಎಕ್ಸ್​ಟರ್ನಲ್ ಬೆಂಚ್​ವಾರ್ಕ್ ಬೇಸ್ಡ್ ಲೆಂಡಿಂಗ್ ರೇಟ್- ಇಬಿಎಲ್​ಆರ್ ಕೂಡ ಅಷ್ಟೇ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಶೇ. 8.65ಕ್ಕೆ ನಿಗದಿಯಾಗಿದೆ. ಇದಲ್ಲದೆ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನೂ 10ರಿಂದ 25 ಮೂಲಾಂಶದಷ್ಟು ಇಳಿಸಲಾಗಿದೆ.

ಇದೆಲ್ಲವೂ ಏ. 15ರಿಂದ ಜಾರಿಗೆ ಬರಲಿದೆ ಎಂದು ಎಸ್​ಬಿಐ ಪ್ರಕಟಣೆ ತಿಳಿಸಿದೆ. ಇದೇ ವೇಳೆ, ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ ತನ್ನ ಸಾಲದ ಮೇಲಿನ ಬಡ್ಡಿ ದರವನ್ನು 25 ಮೂಲಾಂಶದಷ್ಟು ಇಳಿಸಿದೆ. ರೆಪೊ ಲಿಂಕ್ಡ್ ಸಾಲದ ಬಡ್ಡಿದರವನ್ನು ಶೇ. 9.05ರಿಂದ ಶೇ. 8.80ಕ್ಕೆ ಇಳಿಸಲಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net