ಬಾಕುವಿನ COP29ನಲ್ಲಿ ಎಲ್ಲಾ ರಾಷ್ಟ್ರಗಳ ಮಣ್ಣಿನ ನೀತಿಗಳಿಗೆ ಒತ್ತು ನೀಡಿದ ಸದ್ಗುರುಗಳು; ಅವರ ಮಾತುಗಳಲ್ಲಿ…

ವಿಜಯವಾಣಿ
Published on

ಬೆಂಗಳೂರು: ದೀರ್ಘ ಪ್ರಯಾಣ ಮಾಡಬಾರದೆಂಬ ವೈದ್ಯರ ಸಲಹೆ ಇದ್ದರೂ, ಸದ್ಗುರುಗಳು ಅಜರ್ಬೈಜಾನ್‌ನ ಬಾಕುವಿನ COP29 ನಲ್ಲಿ ಮಣ್ಣಿನ ಪುನರುಜ್ಜೀವನ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡಲು ಸಂಕ್ಷಿಪ್ತ ಆದರೆ ಪರಿಣಾಮಕಾರಿ ಪ್ರವಾಸ ಕೈಗೊಂಡರು.

● ಸಮ್ಮೇಳನಕ್ಕೆ ಮುನ್ನ, ಮಣ್ಣು ಉಳಿಸಿ ಅಭಿಯಾನವು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಒಪ್ಪಂದಕ್ಕೆ (UNFCCC) ನೀತಿ ಶಿಫಾರಸುಗಳನ್ನು ಸಲ್ಲಿಸಿತು. ತಜ್ಞರ ಪ್ರಕಾರ, ಇವು COP29 ನಲ್ಲಿ ಕೃಷಿ-ಆಹಾರ ವ್ಯವಸ್ಥೆಗಳಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿವೆ.

● 77 ಪ್ರಮುಖ ಜಾಗತಿಕ ಸಂಸ್ಥೆಗಳು ಈ ನೀತಿಗಳಿಗೆ ಬೆಂಬಲ ನೀಡಿದ್ದು, ಇದು ಅಭಿಯಾನದ ಸಾಧನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.

● ಮಹತ್ವದ ಬೆಳವಣಿಗೆಯಾಗಿ, ಮಣ್ಣು ಉಳಿಸಿ ಅಭಿಯಾನವು ಉಜ್ಬೇಕಿಸ್ತಾನದ ಪರಿಸರ ಸಚಿವಾಲಯದೊಂದಿಗೆ ಒಪ್ಪಂದ (MoU) ಮಾಡಿಕೊಂಡಿದೆ. ಈ ಒಪ್ಪಂದದ ಮೂಲಕ ಅರಲ್ ಸಮುದ್ರದ ಸುತ್ತಲಿನ ಹಾಳಾದ ಭೂಮಿಯೂ ಸೇರಿದಂತೆ ಮಣ್ಣಿನ ಆರೋಗ್ಯದ ಸವಾಲುಗಳನ್ನು ಪರಿಹರಿಸಲು ಮತ್ತು ಭೂಮಿಯನ್ನು ಪುನಶ್ಚೇತನಗೊಳಿಸಲು ಬದ್ಧವಾಗಿದೆ.

ಮಣ್ಣಿನ ಗಂಭೀರ ಸಮಸ್ಯೆಯನ್ನು ಎದುರಿಸಲು 2022 ರಲ್ಲಿ ಮಣ್ಣು ಉಳಿಸಿ ಅಭಿಯಾನವನ್ನು ಆರಂಭಿಸಿದ ಸದ್ಗುರುಗಳು, ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ 2024ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ (COP29) ದಲ್ಲಿ ಭಾಗವಹಿಸಿದರು. ವೈದ್ಯರು ಪ್ರಯಾಣ ಮಾಡಬಾರದೆಂದು ಸಲಹೆ ನೀಡಿದ್ದರೂ, ಸದ್ಗುರುಗಳು ಆಹ್ವಾನವನ್ನು ಸ್ವೀಕರಿಸಿ, ಮಣ್ಣಿನ ಪುನಶ್ಚೇತನ ಮತ್ತು ಹವಾಮಾನ ಬದಲಾವಣೆಯ ಮಹತ್ವವನ್ನು ಒತ್ತಿ ಹೇಳಲು ಸಂಕ್ಷಿಪ್ತ ಪ್ರಯಾಣ ಮಾಡಿದರು.

ಇದನ್ನೂ ಓದಿ: 

ಮಣ್ಣು ಉಳಿಸಿ ಅಭಿಯಾನದ ಪ್ರಭಾವವನ್ನು ಕುರಿತು ಸದ್ಗುರುಗಳು X ನಲ್ಲಿ ಹಂಚಿಕೊಂಡಿದ್ದು, "ಮಣ್ಣು ಉಳಿಸಿ ಅಭಿಯಾನದ ಮೂರು ವರ್ಷಗಳ ನಿರಂತರ ಪ್ರಯತ್ನಗಳ ನಂತರ, ಜಾಗತಿಕ ಹವಾಮಾನ ಸಮ್ಮೇಳನವು ಅಂತಿಮವಾಗಿ 'ಹಸಿರು ಜಗತ್ತು' ಎಂಬ ವಿಷಯದ ಮೇಲೆ ಗಮನ ಹರಿಸಿದೆ. ಕೃಷಿ ಮಣ್ಣಿನ ಪುನಶ್ಚೇತನವು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಅಂಶವಾಗಿದೆ ಎಂಬುದನ್ನು ತೋರಿಸುವ ಮೂಲಕ ಅಜರ್‌ಬೈಜಾನ್ ಮಧ್ಯ ಏಷ್ಯಾವನ್ನು ಮುನ್ನಡೆಸಿ ಜಗತ್ತಿಗೆ ಮಾದರಿಯಾಗಲಿ ಎಂದು ನಾವು ಆಶಿಸುತ್ತೇವೆ. -Sg"

"ನಾನು ಹಲವು ಬಾರಿ ಹೇಳಿದಂತೆ, ನಾವು ಸೇರಿಸುವ ಪ್ರತಿ ಹಸಿರು ಎಲೆಯೂ ಹವಾಮಾನ ಬದಲಾವಣೆಯನ್ನು ತಡೆಯುವ ದಿಕ್ಕಿನಲ್ಲಿ ಒಂದು ಚಿಕ್ಕ ಹೆಜ್ಜೆ. ಹಸಿರು ಎಲೆ ಎಂದರೆ ಹೆಚ್ಚಿನ ಮಣ್ಣು ನೆರಳಿನಡಿಗೆ ಬರಬೇಕು. ಒಮ್ಮೆ ಮಣ್ಣು ನೆರಳಿನಲ್ಲಿದ್ದು ಹಸಿರು ಎಲೆ ಇದ್ದಾಗ, ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ತೈಲದಿಂದ ಮಣ್ಣಿನ ಕಡೆಗಿನ ಈ ಬದಲಾವಣೆ ಬಹಳ ಮಹತ್ವದ್ದು. ಇದು ಹೊಸ ದಾರಿ ತೋರುವಂತಹದ್ದು. ಈ ಗ್ರಹದ ಮೇಲಿನ ಶೇಕಡಾ 95ರಷ್ಟು ಜೀವ ಮಣ್ಣಿನ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ." ಭಾರತದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಒಟ್ಟು ಕೃಷಿ ಕ್ಷೇತ್ರದ ಶೇಕಡಾ 86 ರಷ್ಟಿದ್ದು, ಒಟ್ಟು ಕೃಷಿ ಉತ್ಪಾದನೆಯ ಸುಮಾರು ಶೇಕಡಾ 50 ರಷ್ಟನ್ನು ನೀಡುತ್ತಿದ್ದಾರೆ. ರೈತರಿಗೆ, ವಿಶೇಷವಾಗಿ ಸಣ್ಣ ರೈತರಿಗೆ 'ಹವಾಮಾನ ಹಣಕಾಸು ಸೌಲಭ್ಯ' ಸುಲಭವಾಗಿ ದೊರೆಯಬೇಕೆಂಬುದರ ಪರವಾಗಿ ಮಾತನಾಡಿದ ಸದ್ಗುರುಗಳು, "ಪ್ರಸ್ತುತ, ಕೋಟ್ಯಂತರ ರೈತರಿಗೆ ಒಟ್ಟು ಹವಾಮಾನ ಹಣಕಾಸಿನ ಕೇವಲ ಶೇಕಡಾ 0.8 ರಷ್ಟು ಮಾತ್ರ ಲಭ್ಯವಿದೆ. ಸುಸ್ಥಿರ ಕೃಷಿ ಪದ್ಧತಿಗಳತ್ತ ಮುಖ ಮಾಡಲು ಈ ರೈತರಿಗೆ ಹಣಕಾಸಿನ ನೆರವು ದೊರೆಯದಿದ್ದರೆ, ಆಹಾರ ಭದ್ರತೆಯಲ್ಲಿ ಜಾಗತಿಕ ಸವಾಲುಗಳು ಎದುರಾಗಲಿವೆ" ಎಂದು ಹೇಳಿದರು.

'ಹವಾಮಾನ ಹಣಕಾಸು' ಎಂದರೆ ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವ ಯೋಜನೆಗಳಿಗೆ ನೀಡಲಾಗುವ ವಿಶೇಷ ಹಣಕಾಸು ನೆರವು. ಹವಾಮಾನ ಚರ್ಚೆಗಳಲ್ಲಿ ಫಾಸಿಲ್ ಇಂಧನಗಳ ವಿಷಯವನ್ನು ಪರಿಹರಿಸುವ ಮಹತ್ವವನ್ನು ಒಪ್ಪಿಕೊಂಡ ಸದ್ಗುರುಗಳು, "ನಾವು ನಿರಂತರವಾಗಿ ಫಾಸಿಲ್ ಇಂಧನಗಳನ್ನು ತೊಡೆದುಹಾಕುವ ಬಗ್ಗೆ ಮಾತನಾಡುತ್ತಿದ್ದೇವೆ. ಹೌದು, ಅದು ಆಗಲೇಬೇಕು. ಬದಲಾವಣೆ ನಡೆಯಲೇಬೇಕು. ಆದರೆ ನಾವು ಬಯಸಿದ ಮಾತ್ರಕ್ಕೆ ಇದು ನಡೆಯುವುದಿಲ್ಲ. ಗಮನಾರ್ಹ ತಾಂತ್ರಿಕ ಆವಿಷ್ಕಾರಗಳು ಆಗಬೇಕು. ನೀವು ಅಥವಾ ನಾನು ತೈಲ ಒಳ್ಳೆಯದಲ್ಲ ಎಂದ ಮಾತ್ರಕ್ಕೆ ಜಗತ್ತು ಅದನ್ನು ಬಿಟ್ಟುಕೊಡುವುದಿಲ್ಲ. ಸಮರ್ಪಕ ಪರ್ಯಾಯಗಳು ಹೊರಹೊಮ್ಮಬೇಕು" ಎಂದರು.

ಒಂದು ಮಹತ್ವದ ಬೆಳವಣಿಗೆಯಲ್ಲಿ, ಮಣ್ಣು ಉಳಿಸಿ ಉಪಕ್ರಮವು ಉಜ್ಬೇಕಿಸ್ತಾನ್‌ನ ಪರಿಸರ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅರಲ್ ಸಮುದ್ರದ ಸುತ್ತಮುತ್ತಲಿನ ಹಾಳಾದ ಭೂಮಿಯೂ ಸೇರಿದಂತೆ ಭೂಮಿಯ ಪುನಶ್ಚೇತನ ಮತ್ತು ಮಣ್ಣಿನ ಆರೋಗ್ಯದ ಸವಾಲುಗಳನ್ನು ಎದುರಿಸಲು ಬದ್ಧವಾಗಿದೆ. ಒಪ್ಪಂದದ ಬಗ್ಗೆ ಮಾತನಾಡಿದ ಮಣ್ಣು ಉಳಿಸಿ ಅಭಿಯಾನದ ಮುಖ್ಯ ವಿಜ್ಞಾನಿ ಪ್ರವೀಣಾ ಶ್ರೀಧರ್, "ಉಜ್ಬೇಕಿಸ್ತಾನದ ಅರಲ್ ಸಮುದ್ರ ಸೇರಿದಂತೆ ಜಗತ್ತಿನಾದ್ಯಂತ ಇರುವ ಮಣ್ಣಿನ ಸವೆತದ ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಲು ನಾವು ಮುಂದಾಗಿದ್ದೇವೆ" ಎಂದರು.

"ನಮ್ಮ ಪಾದಗಳ ಕೆಳಗಿರುವ ಪರಿಹಾರ, ಅಂದರೆ ಮಣ್ಣೇ ನಾವು ಹುಡುಕುತ್ತಿರುವ ಎಲ್ಲ ಪರಿಹಾರಗಳಿಗಿಂತ ನಿಜವಾದ ಪರಿಹಾರ. ನಾವು ಮಣ್ಣಿನ ಮೇಲೆ ಕೆಲಸ ಮಾಡಿದರೆ, ಅದು ಹವಾಮಾನ, ನಮ್ಮ ಆಹಾರ ಭದ್ರತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಮುಂದಿನ ಪೀಳಿಗೆಗಳ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ." ಸಮ್ಮೇಳನಕ್ಕೆ ಮುನ್ನ, ಮಣ್ಣು ಉಳಿಸಿ ಅಭಿಯಾನವು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಒಪ್ಪಂದ (UNFCCC)ಕ್ಕೆ ನೀತಿ ಶಿಫಾರಸುಗಳನ್ನು ಸಲ್ಲಿಸಿತು. ಈ ಶಿಫಾರಸುಗಳು ಹವಾಮಾನ ಹಣಕಾಸಿನ ಕಡೆಗೆ ಗಮನ ಸೆಳೆಯುತ್ತವೆ - ವಿಶೇಷವಾಗಿ ಕೃಷಿ ಮಣ್ಣಿನ ಪುನಶ್ಚೇತನದ ಮೇಲೆ ಗಮನ ಕೇಂದ್ರೀಕರಿಸಿ ಹವಾಮಾನ ಸಮಸ್ಯೆಗಳನ್ನು ಎದುರಿಸುವ ಯೋಜನೆಗಳಿಗೆ ಬೆಂಬಲ ನೀಡುವ ಹಣಕಾಸು. 77 ಪ್ರಮುಖ ಜಾಗತಿಕ ಸಂಸ್ಥೆಗಳು ಈ ಶಿಫಾರಸುಗಳನ್ನು ಅನುಮೋದಿಸಿವೆ, ಇದು ಅಭಿಯಾನದ ಪ್ರಭಾವದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.

ಪ್ರಜ್ಞಾವಂತ ಪ್ರಪಂಚ - ಮಣ್ಣು ಉಳಿಸಿ ಅಭಿಯಾನದ ಗುರಿ ಎರಡು: ಮೊದಲನೆಯದಾಗಿ, ಮಾನವತೆ ಎದುರಿಸುತ್ತಿರುವ ವಿನಾಶಕಾರಿ ಮಣ್ಣಿನ ಸವೆತದ ಕಡೆಗೆ ಗಮನ ಸೆಳೆಯುವುದು. ಎರಡನೆಯದಾಗಿ, ಮಣ್ಣನ್ನು ಪುನಶ್ಚೇತನಗೊಳಿಸಲು 193 ರಾಷ್ಟ್ರಗಳಲ್ಲಿ ಸರ್ಕಾರದ ನೀತಿ ಬದಲಾವಣೆಯನ್ನು ಆರಂಭಿಸಿ ಬೆಂಬಲಿಸುವುದು. 2022ರ ಮಾರ್ಚ್‌ನಲ್ಲಿ, ಸದ್ಗುರುಗಳು ಒಬ್ಬಂಟಿ ಬೈಕ್ ಸವಾರನಾಗಿ 27 ದೇಶಗಳ ಮೂಲಕ 100 ದಿನಗಳ ಕಾಲ 30,000 ಕಿ.ಮೀ. ಪ್ರಯಾಣ ಮಾಡಿದರು. ಈ ಪ್ರಯಾಣದಲ್ಲಿ ಸರ್ಕಾರದ ನಾಯಕರು, ಪ್ರಭಾವಿಗಳು ಮತ್ತು ಸಾಮಾನ್ಯ ಜನರನ್ನು ಭೇಟಿಯಾಗಿ 400 ಕೋಟಿ ಜನರ ತನಕ ತಲುಪಿದರು.

‘ಕಾವೇರಿ ಕೂಗು’ ಯೋಜನೆಯಂತಹ ಉಪಕ್ರಮಗಳ ಮೂಲಕ ಈ ಅಭಿಯಾನವು ಈಗಾಗಲೇ ಗಣನೀಯ ಯಶಸ್ಸನ್ನು ಸಾಧಿಸಿದೆ. 2,29,000ಕ್ಕೂ ಹೆಚ್ಚು ರೈತರು ಮರ ಆಧಾರಿತ ಕೃಷಿಗೆ ಮಾರ್ಪಟ್ಟಿದ್ದು, ಇದರಿಂದ ಅವರ ಆದಾಯ 3 ರಿಂದ 8 ಪಟ್ಟು ಹೆಚ್ಚಾಗಿದೆ. ಜೊತೆಗೆ, ಮಣ್ಣು ಉಳಿಸಿ ಅಭಿಯಾನವು 27,000 ರೈತರಿಗೆ ಸಮೃದ್ಧ ಕೃಷಿ ಪದ್ಧತಿಗಳ (ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನಗಳ) ತರಬೇತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net