Forest encroaches ಸಕ್ರಮಾತಿಗೆ ಆಗ್ರಹಿಸಿ ಬೆಂಗಳೂರು ಚಲೋ ನವೆಂಬರ್‌ 21 ರಂದು

Forest encroaches
Published on

ಕಾರವಾರ:  ನವೆಂಬರ್ 21 ರಂದು Forest encroaches ಬೆಂಗಳೂರು ಚಲೋ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ತಿಳಿಸಿದರು. ಹೋರಾಟದ ಕರ ಪತ್ರವನ್ನು ಬಿಡುಗಡೆ ಮಾಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 16 ಜಿಲ್ಲೆಗಳಿಂದ 10 ಸಾವಿರಕ್ಕೂ ಅಽಕ ಅರಣ್ಯವಾಸಿಗಳು ಸೇರಿ ನಮ್ಮ ಬೇಡಿಕೆಗಳಿಗೆ ಒತ್ತಾಯಿಸಲಿದ್ದೇವೆ ಎಂದು ತಿಳಿಸಿದರು. 3 ತಲೆಮಾರಿನ ದಾಖಲೆ ಇಲ್ಲ ಎಂಬ ಕಾರಣಕ್ಕೆ ಹಕ್ಕು ಕಾಯ್ದೆಯಡಿ ಸಾಗುವಳಿ ಹಕ್ಕು ಕೋರಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದ 63 ಸಾವಿರ ಅರ್ಜಿಹಳನ್ನು ತಿರಸ್ಕರಿಸಲಾಗಿದೆ. ಮೂರು ತಲೆಮಾರಿನ ವೈಯಕ್ತಿಕ ದಾಖಲೆಗಳಿರಬೇಕಿಲ್ಲ. ಜನಾಂಗಗಳು ವಾಸಿಸಿದ ಬಗ್ಗೆ ಮೂರು ತಲೆಮಾರಿನ ಸಾಂದರ್ಭಿಕ ದಾಖಲೆಗಳಿದ್ದರೂ ಅವರಿಗೆ ಹಕ್ಕು ಪತ್ರ ನೀಡಬಹುದು ಎಂದು 2014 ರಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮಾತ್ರವಲ್ಲ. ಈ ಸಂಬಂಧ ಗುಜರಾತ್ ಹೈಕೋರ್ಟ್ ಸಹ ತೀರ್ಪು ನೀಡಿದೆ. ಆದರೂ ಸರ್ಕಾರ ಅರಣ್ಯ ಹಕ್ಕು ಪತ್ರ ನೀಡಲು 3 ತಲೆಮಾರಿನ ದಾಖಲೆ ಕೇಳುತ್ತಿರುವುದು, ವಿಧಾನಸಭೆಯಲ್ಲಿ ನಿರ್ಣಯಿಸಿರುವುದು ಸರಿಯಲ್ಲ. ಬೆಂಗಳೂರು ಚಲೋ ಸಂದರ್ಭದಲ್ಲಿ ಸರ್ಕಾರಕ್ಕೆ ಈ ವಿಷಯಗಳ ಕುರಿತು ಮನವರಿಕೆ ಮಾಡುತ್ತಿದ್ದೇವೆ ಎಂದರು.

1978 ಪೂರ್ವದ Forest encroaches ಸಕ್ರಮಕ್ಕೆ ಒತ್ತಾಯ 

1978 ಪೂರ್ವದಲ್ಲಿ ಅರಣ್ಯ ಅತಿಕ್ರಮಣ ಮಾಡಿಕೊಂಡ 19,384 ಪ್ರಕರಣಗಳಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 3,255 ಕೃಷಿಕರ ಹೆಸರಿನಲ್ಲಿ ಇನ್ನೂ ಜಮೀನು ದಾಖಲೆಗಳಾಗಿಲ್ಲ. ಭೂ ಮಾಲೀಕರ ಹೆಸರಿಗೆ ಭೂಮಿಯನ್ನು ಮಾಡಿಕೊಡಬೇಕು ಎಂಬುದು ನಮ್ಮ ಎರಡನೇ ಆಗ್ರಹವಾಗಿದೆ ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿ (Forest encroaches act ) ಜಿಲ್ಲೆಯಲ್ಲಿ ಮಾಡಿದ ಶೇ.72 ರಷ್ಟು ಜಿಪಿಎಸ್ ಅಸಮರ್ಪಕ, ಕಾನೂನು ಬಾಹಿರವಾಗಿದೆ. ಅದರ ವಿರುದ್ಧ 33 ಸಾವಿರ ಮೇಲ್ಮನವಿಯನ್ನು ಸಲ್ಲಿಸಲಾಗಿದೆ. ಮರು ಜಿಪಿಎಸ್ ಸರ್ವೇ ಮಾಡಬೇಕು. ಮಾಹಿತಿ ಕೊರತೆಯಿಂದ ಜಿಲ್ಲೆಯ ಶೇ.9 ರಷ್ಟು ಅತಿಕ್ರಮಣದಾರರು ಅರ್ಜಿ ಸಲ್ಲಿಸಿಲ್ಲ. ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗುವ ತೊಂದರೆಗಳ ಬಗ್ಗೆ ಕರ ಪತ್ರದ ಮೂಲಕ ಜಾಗೃತಿ ಮೂಡಿಸಿದ್ದೆವು. ನಂತರ 1ಲಕ್ಷಕ್ಕೂ ಅಽಕ ವೈಯಕ್ತಿಕ ಆಕ್ಷೇಪಣೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೇವೆ ಈ ಎಲ್ಲ ಬೇಡಿಕೆಗಳ ಬಗ್ಗೆ ಬೆಂಗಳೂರು ಚಲೋದಲ್ಲಿ ಹೋರಾಟ ಮಾಡಲಿದ್ದೇವೆ ಎಂದರು. ಮಂಜುನಾಥ ಮರಾಠಿ, ರಾಜೇಶ ಮಿತ್ರ ನಾಯ್ಕ, ಬೀಜು ಪೀಟರ್ ಪಿಳ್ಳೆ, ಅರವಿಂದ ಗೌಡ, ರಾಜು ಹರಿಕಾಂತ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net