ಸರೋಜಾ ದೇವಿ ವಿಧಿವಶ: ಕನ್ನಡದ ಅಭಿನೇತ್ರಿ ನಟನೆಗೆ ಒಲಿದ ಜೀವಮಾನ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ... | Passes Away

dk - 2025-07-14T134807.716
Published on

Passes Away: ಕನ್ನಡ ಚಿತ್ರರಂಗದಲ್ಲಿ ಕನ್ನಡದ ಗಿಳಿ ಎಂದೇ ಪ್ರಸಿದ್ದಿ ಪಡೆದ ದಕ್ಷಿಣ ಭಾರತದ ಪ್ರಖ್ಯಾತ ನಟಿಯರಲ್ಲಿ ಒಬ್ಬರಾದ ಬಿ.ಸರೋಜಾ ದೇವಿ ಅವರು ತಮ್ಮ 87ನೇಯ ವಯಸ್ಸಿನಲ್ಲಿ ಬೆಂಗಳೂರಿನ ಮಲೇಶ್ವರಂನಲ್ಲಿರುವ ಸ್ವಗೃಹದಲ್ಲೇ(ಜು.14) ಕೊನೆಯುಸಿರೆಳೆದಿದ್ದಾರೆ.

ನಟಿ ಸರೋಜ ದೇವಿ ಕನ್ನಡದ ಮೊದಲ ಮಹಿಳಾ ಪ್ರಸಿದ್ದ ನಟಿಯಾಗಿದ್ದು, 1955ರಲ್ಲಿ 'ಮಹಾಕವಿ ಕಾಳಿದಾಸ' ಸಿನಿಮಾದ ಮೂಲಕ ತಮ್ಮ 17ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದರು. ಇವರು ನಟಿಸಿದ ಮೊದಲ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಇನ್ನು ಪ್ರಶಸ್ತಿ ವಿಚಾರಕ್ಕೆ ಬರುವುದಾದರೆ, ಸರೋಜ ದೇವಿ ಅವರಿಗೆ 2008ರಲ್ಲಿ ಭಾರತ ಸರ್ಕಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, 1969ರಲ್ಲಿ ಪದ್ಮಶ್ರೀ ಹಾಗೂ 1992ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳನ್ನು ನೀಡಲಾಗಿದೆ. ಇವರ 7 ದಶಕಗಳ ಸಿನಿ ಜರ್ನಿಯಲ್ಲಿ ಹಲವಾರು ಭಾಷೆಗಳ ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಪ್ರಮುಖವಾಗಿ 2009ರಲ್ಲಿ ಕರ್ನಾಟಕ ಸರ್ಕಾರ ಡಾ.ರಾಜ್​ಕುಮಾರ್​ ಜೀವಮಾನ ಸಾಧನಾ ಪ್ರಶಸ್ತಿ, 2009ರಲ್ಲಿ ತಮಿಳುನಾಡು ಸರ್ಕಾರದಿಂದ ಕಲೈ ಮಾಮಣಿ ಪ್ರಶಸ್ತಿ, 1993ರಲ್ಲಿ MGR ಪ್ರಶಸ್ತಿ, 1988ರಲ್ಲಿ ರಾಜ್ಯೋತ್ಸವ ಹಾಗೂ 1965ರಲ್ಲಿ ಅಭಿನಯ ಸರಸ್ವತಿ ಪ್ರಶಸ್ತಿ ದೊರಕಿದೆ.

ಜತೆಗೆ ದಕ್ಷಿಣ ಭಾರತದಲ್ಲಿ ನೀಡಲಾದ (1994 ರಲ್ಲಿ) ಫಿಲ್ಮ್​ಫೇರ್​ ಅವಾರ್ಡ್​ಹಾಗೂ ತಮಿಳು ಸಿನಿಮಾದ ಸಾಧನೆಗಾಗಿ ವಿಜಯ ಪ್ರಶಸ್ತಿ(2006ರಲ್ಲಿ), ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್​ರೇಟ್​ ಪ್ರಶಸ್ತಿಗಳು ಲಭಿಸಿವೆ.

ಸರೋಜ ದೇವಿಯು ಕನ್ನಡದ ಪ್ರಮುಖ ಸಿನಿಮಾಗಳಾದ ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಶ್ರೀರಾಮ ಪೂಜಾ, ರತ್ನಗಿರಿ ರಹಸ್ಯ, ಪಂಚರತ್ನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net