ವಿಂಬಲ್ಡನ್​ ವಿಜೇತ ಸಿನ್ನರ್​ಗೆ ಶುಭಾಶಯ ಕೋರಿದ ಸಚಿನ್​ ತೆಂಡೂಲ್ಕರ್​ | Wimbledon

dk - 2025-07-14T121530.571
Published on

Wimbledon: ವಿಂಬಲ್ಡನ್​ 2025 ವಿಜೇತ ಜನ್ನಿಕ್​ ಸಿನ್ನರ್(Jannik Sinner)​ಗೆ ಭಾರತದ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​​​ ಶುಭಾಶಯ (ಜು.14) ಕೋರಿದ್ದಾರೆ.

ಈ ಕುರಿತು ತಮ್ಮ ಎಕ್ಸ್​​ ಖಾತೆಯಲ್ಲಿ ಸೋಮವಾರ ಹಂಚಿಕೊಂಡಿರುವ ಸಚಿನ್​​, ''ಅಲ್ಕಾರಾಝಾ ಒಬ್ಬ ಅದ್ಭುತ ಆಟಗಾರ. ಆದರೆ, ಅವರ ವಿರುದ್ಧ ಆಡಿದ ಜನ್ನಿಕ್ ಸಿನ್ನರ್​ ದಿಟ್ಟ ಹೋರಾಟಕ್ಕೆ ಜಯ ದೊರಕಿದೆ'' ಎಂದು ಶ್ಲಾಘಿಸಿದ್ದಾರೆ.

ಈ ಫೈನಲ್​ ಪಂದ್ಯ ತುಂಬಾ ರೋಚಕತೆಯಿಂದ ಕೂಡಿತ್ತು. ಉಭಯ ಆಟಗಾರರು ಉತ್ತಮ ಪೈಪೋಟಿಯಿಂದ ಪಂದ್ಯದ ಗತಿಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದವು. ಸಿನ್ನರ್​ಗೆ ಶುಭಾಶಯ. ಅಲ್ಕಾರಾಝಾ​ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಇನ್ನೂ ನಿನಗೆ ಹಲವು ಫೈನಲ್​ಗಳು ಬರಲಿವೆ ಎಂದು ಸಚಿನ್​ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಸಿನ್ನರ್​,''ನಾನು ಅಲ್ಕಾರಾಝಾ ಬಗ್ಗೆ ಮಾತನಾಡುವುದಾದರೆ, ಈ ಟೂರ್ನಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಇದಕ್ಕೆ ನಿಮಗೆ ಧನ್ಯವಾದಗಳು.ಈ ಟ್ರೋಫಿಯನ್ನು ನೀವು ಎರೆಡು ಬಾರಿ ಗೆದಿದ್ದೀರಿ. ಹಾಗಾಗಿ, ನಿಮ್ಮ ವಿರುದ್ಧ ಆಡುವುದು ತುಂಬಾ ಕಠಿಣ ಎನಿಸಿತು'' ಎಂದಿದ್ದಾರೆ.

ಜು.13 ರಂದು ನಡೆದ ವಿಂಬಲ್ಡನ್​ ಫೈನಲ್​ ಪಂದ್ಯದಲ್ಲಿ ಸ್ಪೇನ್​ನ ಯುವತಾರೆ ಹಾಗೂ ಹಾಲಿ ಚಾಂಪಿಯನ್​ ಆಗಿದ್ದ ಅಲ್ಕಾರಾಝಾ​ನನ್ನು ಇಟಲಿಯ 23 ವರ್ಷದ ಜನ್ನಿಕ್​ ಸಿನ್ನರ್​ 4-6, 6-4, 6-4, 6-4 ಅಂತರದಿಂದ ಸೋಲಿಸುವ ಮೂಲಕ ಚೊಚ್ಚಲ ವಿಂಬಲ್ಡನ್​ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.

ಇದೇ ಮೇನಲ್ಲಿ ನಡೆದಿದ್ದ ಫ್ರೇಂಚ್​ ಓಪನ್​ನಲ್ಲಿ ಅಲ್ಕಾರಾಝಾ​, ಜನ್ನಿಕ್​ ಸಿನ್ನರ್​ ಅವರನ್ನು ಸೋಲಿಸಿ, ಟ್ರೋಪಿಯನ್ನು ಗೆದ್ದುಕೊಂಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net