ಪ್ರಭಾರ ಭತ್ಯೆ ನೀಡಿಕೆಯ ನಿಯಮಾವಳಿಗಳೇನು? | ಸರ್ಕಾರಿ ಕಾರ್ನರ್​

sarkari corner4
Published on

ಪ್ರಶ್ನೆ: ನಾನು ಸರ್ಕಾರಿ ಇಲಾಖೆಯೊಂದರಲ್ಲಿ ಬೆರಳಚ್ಚುಗಾರಳಾಗಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಚೇರಿಯಲ್ಲಿನ ಶೀಘ್ರಲಿಪಿಗಾರರ ಹುದ್ದೆಗೆ ನಿಯಮ 32ರಂತೆ 2021ರ ಮಾರ್ಚ್​ನಿಂದ ಪ್ರಭಾರದಲ್ಲಿರಿಸಿದ್ದಾರೆ. ಕಚೇರಿಯಲ್ಲಿ ಮೊದಲ 3 ತಿಂಗಳಿಗೆ ಶೇಕಡ 7.5, ನಂತರ 3 ತಿಂಗಳಿಗೆ ಶೇ.15 ಪ್ರಭಾರಭತ್ಯೆ ನೀಡುತ್ತಿದ್ದಾರೆ. ಬಳಿಕ ಪ್ರಭಾರದ ಆದೇಶ ಪರಿಷ್ಕರಿಸಿ ಮುಂದುವರಿದ 6 ತಿಂಗಳ ನಂತರ ಅವಧಿಗೆ ಶೇ.7.5 ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವೇ?
| ವಿಜಯಲ್ಮ, ರಾಯಚೂರು

ಉತ್ತರ: ದಿನಾಂಕ: 25-11-2019ರ ಕರ್ನಾಟಕ ಸರ್ಕಾರಿ ಆದೇಶ ಸಂಖ್ಯೆ: ಆಇ 05(ಇ) ಸೇನಿಸೇ 2019ರಂತೆ ಮೊದಲ ಮೂರು ತಿಂಗಳಿಗೆ ಶೇಕಡ 7.5 ಪ್ರಭಾರ ಭತ್ಯೆಯನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 68 ರಂತೆ ನಿಯತಗೊಳಿಸಬೇಕೆಂದು ಸೂಚಿಸಿದೆ. ಆದರೆ, ನಿಮ್ಮ ಕಚೇರಿಯಲ್ಲಿ ನಿಮಗೆ ನೀಡುತ್ತಿರುವ ಪ್ರಭಾರಭತ್ಯೆ ನಿಯತಗೊಳಿಸುತ್ತಿರುವುದು ಸರಿಯಾದ ಕ್ರಮವಲ್ಲ. ಈ ಆದೇಶದಂತೆ ಮೂರು ತಿಂಗಳ ನಂತರ ಎಷ್ಟೇ ಅವಧಿಯಾಗಿದ್ದರೂ ಪ್ರಭಾರ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನಕ್ಕೆ ಅನುಗುಣವಾಗಿ ಶೇ.15 ಪ್ರಭಾರ ಭತ್ಯೆ ಮಂಜೂರು ಮಾಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net