ಕಾಲಬದ್ಧ ಬಡ್ತಿಗೆ ಇರುವ ನಿಯಮವೇನು? | ಸರ್ಕಾರಿ ಕಾರ್ನರ್​

sarkari corner2
Published on

ಪ್ರಶ್ನೆ: ನಾನು 1-3-2012 ರಿಂದ ಕಾರಾಗೃಹ ಇಲಾಖೆಯಲ್ಲಿ ವೀಕ್ಷಕನಾಗಿ ಸೇವೆ ಸಲ್ಲಿಸಿ 2017ರಲ್ಲಿ ವಿಮಾ ಇಲಾಖೆಯ ದ್ವೀತಿಯ ದರ್ಜೆ ಸಹಾಯಕನಾಗಿ ಸೇರಿದ್ದು, 1-3-2022ಕ್ಕೆ 10 ವರ್ಷಗಳಾಗುತ್ತವೆ. ಈ ಎರಡು ಹುದ್ದೆಗಳ ವೇತನ ಶ್ರೇಣಿ ಸಮಾನವಾಗಿದ್ದು, ನನಗೆ ಹತ್ತು ವರ್ಷದ ಕಾಲಬದ್ಧ ಬಡ್ತಿ ಲಭ್ಯವಾಗುತ್ತದೆಯೇ?

|ರವಿ. ಎಸ್​, ಹಾವೇರಿ

ಉತ್ತರ: ದಿನಾಂಕ: 8-3-2017ರ ಸರ್ಕಾರದ ಆದೇಶ ಸಂಖ್ಯೆ ಆಇ13.ಎಸ್​ಆರ್​ಪಿ 2014 ರಂತೆ ಸ್ವಂತ ಕೋರಿಕೆ ಮೇರೆಗೆ ಸರ್ಕಾರಿ ನೌಕರನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಯ ಸಮಾನ ವೇತನ ಶ್ರೇಣಿ ಹೊಂದಿದ ಹುದ್ದೆಗೆ ನೇಮಕವಾದಲ್ಲಿ ಸಲ್ಲಿಸಿದ ಜ್ಯೇಷ್ಠತೆ ಪರಿಗಣಿಸದೆ, ಕಾಲಬದ್ಧ ಮುಂಬಡ್ತಿ, ಹಿರಿಯ ವೇತನ ಶ್ರೇಣಿ ಬಡ್ತಿ ಸೌಲಭ್ಯಗಳಿಗೆ ಪರಿಗಣಿಸಲು ಸೂಚಿಸಲಾಗಿದೆ. ಆದ್ದರಿಂದ ನೀವು ಹತ್ತುವರ್ಷಗಳ ಕಾಲಬದ್ಧ ಬಡ್ತಿಗೆ ಅರ್ಹರಾಗುತ್ತೀರಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಕೃತಿಯನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net