ಸರ್ಕಾರಿ ಕಾರ್ನರ್​: ಸಿಆರ್​ಪಿಗಳು ಕರ್ತವ್ಯ, ಅಧಿಕಾರ ಏನಿದೆ?

sarkari
Published on

ಪ್ರಶ್ನೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಆರ್​ಪಿಗಳು ಶಾಲೆಗೆ ಕರ್ತವ್ಯ ನಿಮಿತ್ತ ಭೇಟಿ ನೀಡಿದ ಸಂದರ್ಭ ಮುಖ್ಯಶಿಕ್ಷಕ ಹಾಗೂ ಸಹಶಿಕ್ಷಕರ ಹಾಜರಿ ಪರಿಶೀಲನೆ ಮಾಡಿ ಸಹಿ ಮಾಡಲು ಅಧಿಕಾರವಿದೆಯೇ? ಅಥವಾ ಕೇವಲ ಸಂದರ್ಶನ ವಹಿಯಲ್ಲಿ ಸಹಿ ಮಾಡುವ ಅಧಿಕಾರ ಹೊಂದಿರುತ್ತಾರೆಯೇ?
| ನಾಗರಾಜ್​ ಭಾರದ್ವಾಜ್​, ಕೆ.ಆರ್​.ನಗರ, ಮೈಸೂರು

ಉತ್ತರ: 30.12.2020ರ ಸರ್ಕಾರಿ ಆದೇಶ ಸಂಖ್ಯೆ ಇಪಿ 22 ಎಂಸಿಡಿ 2022ರಲ್ಲಿ ಸಿಆರ್​ಪಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಮಾರ್ಗಸೂಚಿಯಂತೆ, ಸಿಆರ್​ಪಿಗಳ ಶಾಲಾ ಸಂದರ್ಶನ ಸಂದರ್ಭಗಳಲ್ಲಿ ಶಿಕ್ಷಕರ ಸಂದೇಹಗಳು/ಕಲಿಕಾ ಬೋಧನೋಪಕರಣ ಬಳಕೆ ಕುರಿತಂತೆ ಮಾರ್ಗದರ್ಶನ ನೀಡುವುದು ಮುಂತಾದ ಕರ್ತವ್ಯಗಳನ್ನು ಸೂಚಿಸಿದೆ. ಆದರೆ ಈ ಆದೇಶದಲ್ಲಿ ಆಡಳಿತಾತ್ಮಕ ವಿಷಯಗಳಾದ ಹಾಜರಾತಿ ಪುಸ್ತಕ ಶಿಕ್ಷಕರ ನಿಯಂತ್ರಣಾಧಿಕಾರವನ್ನು ಸಿಆರ್​ಪಿಗಳಿಗೆ ನೀಡಿರುವುದಿಲ್ಲ. ಶೈಕ್ಷಣಿಕ ಯೊಜನೆ/ವಿಷಯಗಳಿಗಷ್ಟೇ ಸೀಮಿತವಾಗಿರುತ್ತದೆ. ಆದ್ದರಿಂದ ಅವರು ಸಂದರ್ಶನ ಪುಸ್ತಕದಲ್ಲಿ ಸಹಿ ಮಾಡಿ, ಷರಾ ಬರೆಯಬಹುದೇ ವಿನ: ಹಾಜರಾತಿ ಪುಸ್ತಕದಲ್ಲಿ ಅಲ್ಲ. ಸಿಆರ್​ಪಿಗಳು ಅವರ ಕರ್ತವ್ಯವನ್ನು ಮೇಲಿನ ಆದೇಶದಂತೆ ನಿರ್ವಹಿಸದೆ ಇದ್ದರೆ ಅವರ ಮೇಲಧಿಕಾರಿಗಳಿಗೆ ಈ ಬಗ್ಗೆ ಶಾಲಾ ಮುಖ್ಯಸ್ಥರು ವರದಿ ಮಾಡಬೇಕು. ಹೆಚ್ಚಿನ ವಿವರಗಳಿಗೆ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net