

ನಾನು ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದೇನೆ. ಈ ಹಿಂದೆ ಸರ್ಕಾರದಿಂದ ಅನುದಾನಿತ ಪದವಿಪೂರ್ವ ಕಾಲೇಜಿನಲ್ಲಿ ಕೆಲಸ ಮಾಡಿದ್ದೆ. ನಾನು ಅನುಮತಿ ಪಡೆದು ಪ್ರಸ್ತುತ ಹುದ್ದೆಗೆ ಸೇರಿರುವುದರಿಂದ ನನ್ನ ಹಿಂದಿನ ಸೇವೆಯು ಪರಿಗಣಿತವಾಗುತ್ತದೆಯೇ?
| ಕೆಂಪರಾಜು ಶಿವಮೊಗ್ಗ
ಕರ್ನಾಟಕ ಸಿವಿಲ್ ಸೇವಾ (ನೇಮಕಾತಿ) ನಿಯಮಾವಳಿಯ ನಿಯಮ 11ರಂತೆ ಸಂಪೂರ್ಣವಾಗಿ ಸರ್ಕಾರಿ ಸೇವೆಯಲ್ಲಿದ್ದು, ಪೂರ್ವಾನುಮತಿ ಪಡೆದು ಹೊಸ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಅಂತಹ ನೌಕರ ಆಯ್ಕೆಯಾದಾಗ ಅವನನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 ಬಿ ಪ್ರಕಾರ ಕರ್ತವ್ಯದಿಂದ ಬಿಡುಗಡೆಗೊಳಿಸಿದರೆ ಅವನ ಹಿಂದಿನ ಸೇವೆ, ರಜೆ ಸೌಲಭ್ಯ ಹಾಗೂ ವೇತನ ರಕ್ಷಣೆ ಲಭ್ಯವಾಗುತ್ತದೆ. ಆದರೆ ನೀವು ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ಈ ನಿಯಮಾವಳಿ ರೀತ್ಯ ನಿಮ್ಮ ಅನುದಾನಿತ ಸೇವೆ ಪರಿಗಣಿಸಲಾಗುವುದಿಲ್ಲ.