

ಪ್ರಶ್ನೆ: ಗಂಡ- ಹೆಂಡತಿ ರಾಜ್ಯ ಸರ್ಕಾರದ ನೌಕರರಾಗಿದ್ದು, ಇಬ್ಬರೂ ಒಂದೇ ದಿನ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯವನ ವಯಸ್ಸು 25 ವರ್ಷ, ಕಿರಿಯವನ ವಯಸ್ಸು 23 ವರ್ಷ. ಇಬ್ಬರಿಗೂ ಏಕ ಕಾಲದಲ್ಲಿ ಅನುಕಂಪ ಆಧಾರದ ಮೇಲೆ ನೌಕರಿ ಸಿಗಲಿದೆಯೇ?
| ಪ್ರಾಣೇಶ ರಾವ್, ಕಲಬುರಗಿ
ಉತ್ತರ: 1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪ ಆಧಾರದ ಮೇಲೆ ನೇಮಕಾತಿ) ನಿಯಮಾವಳಿಯ ನಿಯಮ 3ರಂತೆ ಅವಲಂಬಿತ ಇಬ್ಬರು ಮಕ್ಕಳು ಅನುಕಂಪದ ನೇಮಕಕ್ಕೆ ಅರ್ಹರು. ಈ ಎರಡು ಮಕ್ಕಳು ಪ್ರತ್ಯೇಕವಾಗಿ ಅವರ ತಂದೆ| ತಾಯಿಗಳ ನೇಮಕಾತಿ ಪ್ರಾಧಿಕಾರಕ್ಕೆ ನಿಯಮ 5ರಂತೆ ನಿಧನದ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ, ಅವರವರ ವಿದ್ಯಾರ್ಹತೆಗೆ ತಕ್ಕ ಹುದ್ದೆಗಳಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ಪುಸ್ತಕ ನೋಡಬಹುದು.