ಸರ್ಕಾರಿ ಕಾರ್ನರ್ | ಅನುಕಂಪ ಹುದ್ದೆ ಪಡೆಯಲು ಕಾಲಾವಧಿ

corner
Published on
ದಿನದ ಪ್ರಶ್ನೆ 

ಸರ್ಕಾರಿ ನೌಕರಳಾಗಿದ್ದ ನನ್ನ ಪತ್ನಿ ನಿಧನರಾಗಿದ್ದು, ನಮಗೆ ಒಬ್ಬನೇ ಮಗನಿದ್ದಾನೆ. ಈಗ ಆತ ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿದ್ದು, ಅವನಿಗೆ ಅನುಕಂಪದ ನೇಮಕಾತಿಯಲ್ಲಿ ಅವಕಾಶ ಸಿಗಲಿದೆಯೇ?

| ವೆಂಕಟೇಶ್ ಹಾಸನ

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿಯ ನಿಯಮ 5ರಂತೆ ಮೃತ ಸರ್ಕಾರಿ ನೌಕರನ ಅಲಂಬಿತ ಮಕ್ಕಳು ಒಂದು ವರ್ಷದೊಳಗೆ 18 ವರ್ಷ ಪೂರೈಸಿದರೆ, ಅಂಥವರು ಮಾತ್ರ ಅರ್ಹರು. ನಿಮ್ಮ ಮಗನಿಗೆ 18 ವರ್ಷ ಆಗದಿರುವ ಕಾರಣ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹನಾಗುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net