ಕೊಲೆಗಾರರಿಗೆ ಸಿಂಹಸ್ವಪ್ನವಾಗಿದ್ದ ಪತ್ತೇದಾರಿ ನಾಯಿ ವಿಶ್ವ ಶ್ವಾನ ದಿನದಂದೇ ಸಾವು!

Thunga Dog
Published on

ದಾವಣಗೆರೆ: ಕೊಲೆಗಾರರಿಗೆ ಸಿಂಹಸ್ವಪ್ನವಾಗಿದ್ದ ಕ್ರೈಮ್​ ಡಿಟೆಕ್ಟಿವ್​ ನಾಯಿ ವಿಶ್ವ ಶ್ವಾನ ದಿನದಿಂದೇ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ತುಂಗಾ ಎಂಬ ಹೆಸರಿನ ಈ ಕ್ರೈಮ್ ಡಿಟೆಕ್ಟಿವ್ ಶ್ವಾನ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಖ್ಯಾತಿ ಪಡೆದಿದೆ.

ಎರಡು ದಿನಗಳಿಂದ ಡೆಂಘೆ ಜ್ವರದಿಂದ ಬಳಲುತ್ತಿದ್ದ ತುಂಗಾ ಇಂದು ಅನಾರೋಗ್ಯ ಉಲ್ಬಣಿಸಿದ್ದರಿಂದ ಆಸ್ಪತ್ರೆಯಲ್ಲಿ ಸಾವಿಗೀಡಾಗಿದೆ. ಈ ಶ್ವಾನದ ಅಗಲಿಕೆಯಿಂದ ಪೊಲೀಸ್ ಇಲಾಖೆಗೆ ಭಾರಿ ನಷ್ಟ ಉಂಟಾದಂತಾಗಿದೆ.

ತುಂಗಾ 70 ಕೊಲೆ, 30 ಡಕಾಯಿತಿ ಪ್ರಕರಣಗಳನ್ನು ಭೇದಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಪರಿಣಾಮವಾಗಿ ಕೊಲೆ ಕೇಸ್​ನಲ್ಲಿ ಇಬ್ಬರಿಗೆ ಗಲ್ಲು, 4 ಜನರಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಸೂಳೆಕೆರೆ ಶೂಟೌಟ್ ಪ್ರಕರಣದಲ್ಲಿ 11 ಕಿಲೋಮೀಟರ್​ವರೆಗೂ ಓಡಿ ಆರೋಪಿಯನ್ನು ಪತ್ತೆ ಮಾಡಿ ತುಂಗಾ ಸಾಹಸ ಮೆರೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net