ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಬೆಳಗ್ಗೆ ನಾಪತ್ತೆ!

Nethravathi
Published on

ಉಡುಪಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿಯೊಬ್ಬಳು ಬೆಳಗ್ಗೆ ನಾಪತ್ತೆಯಾಗಿರುವ ಪ್ರಕರಣವೊಂದು ನಡೆದಿದೆ. ಬೆಳಗ್ಗೆ ಶೌಚಗೃಹಕ್ಕೆಂದು ಹೋದವಳು ವಾಪಸ್ ಬರದ ಕಾರಣ ಪೊಲೀಸರಿಗೆ ದೂರು ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಉಡುಪಿ ಜಿಲ್ಲೆಯ ಉದ್ಯಾವರ ಸಂಪಿಗೆ ನಗರದ ನಿವಾಸಿ ನೇತ್ರಾವತಿ (20) ಕಾಣೆಯಾದಾಕೆ. ಈಕೆ ಕಳೆದ ಮೂರು ತಿಂಗಳಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಆಗಸ್ಟ್ 23ರಿಂದ ಕಾಣೆಯಾಗಿದ್ದು, ಈಕೆಗಾಗಿ ಹುಡುಕಾಟ ನಡೆಯುತ್ತಿದೆ.

ಈಕೆ ಆಗಸ್ಟ್ 22ರ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದಳು. ಆದರೆ ಬೆಳಗ್ಗೆ ಎದ್ದು ಶೌಚಗೃಹಕ್ಕೆಂದು ಹೋದವಳು ಕಾಣೆಯಾಗಿದ್ದಾಳೆ. ಈಕೆಗಾಗಿ ಮನೆಯ ಆಸುಪಾಸು, ಸಂಬಂಧಿಕರ ಮನೆಯಲ್ಲೂ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮನೆಯವರು ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net