ಕುಂದಾಪುರದ ಫ್ಲೈಓವರ್​ನಲ್ಲಿ ಕೈ ಇಟ್ಟಲ್ಲೆಲ್ಲ ಕರೆಂಟ್!; ವಿದ್ಯುತ್ ಸೋರಿಕೆ, ಸಂಪರ್ಕ ಕಡಿತಗೊಳಿಸಿದ ಮೆಸ್ಕಾಂ

Kundapura Flyover F
Published on

ಕುಂದಾಪುರ: ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕುಂದಾಪುರ ಮೇಲ್ಸೇತುವೆ ಕೊನೆಗೂ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಅಲ್ಲಿ ಇದೀಗ ಕೈ ಇಟ್ಟಲ್ಲೆಲ್ಲ ಕರೆಂಟ್ ಎಂಬಂತಾಗಿದ್ದು, ಕೂಡಲೇ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ಅವಘಡ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ಹಾದು ಹೋಗಿರುವ ಫ್ಲೈಓವರ್​ನಲ್ಲಿ ಅಸಮರ್ಪಕ ಕಾಮಗಾರಿಯಿಂದಾಗಿ ವಿದ್ಯುತ್ ಪ್ರವಹಿಸಲಾರಂಭಿಸಿದೆ. ಫ್ಲೈವರ್​ ಅಂಚಿನ ಗೋಡೆ ಮೇಲೆ ಟೆಸ್ಟರ್​ ಇಟ್ಟು ಪರೀಕ್ಷಿಸಿದರೆ ವಿದ್ಯುತ್ ಪ್ರವಾಹ ಇರುವುದು ದೃಢಪಟ್ಟಿದೆ.

ದಾರಿದೀಪಕ್ಕೆ ನೀಡಲಾಗಿರುವ ವಿದ್ಯುತ್ ಸಂಪರ್ಕ ಸೋರಿಕೆ ಆಗುತ್ತಿರುವುದರಿಂದ ಮಳೆ ನೀರಿನ ಕಾರಣಕ್ಕೆ ಫ್ಲೈ ಓವರ್​​ನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಸಾರ್ವಜನಿಕರು ಈ ಬಗ್ಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದು, ಅವರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಭಾರಿ ಅವಘಡ ತಪ್ಪಿದ್ದು, ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ನವಯುಗ ಕಂಪನಿಯ ಉಪ ವಿಭಾಗಾಧಿಕಾರಿ ಕೆ. ರಾಜು. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net