ಮಗನ ಶಿಕ್ಷಣದ ಖರ್ಚಿಗಾಗಿ ಎಲಾನ್​ ಮಸ್ಕ್ ಜತೆಗಿನ ಫೋಟೋ ಹರಾಜಿಗಿಟ್ಲು ಹಳೇ ಲವರ್​!

Elon Musk
Published on

ನವದೆಹಲಿ: ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಎಲಾನ್​ ಮಸ್ಕ್​ನ ಹಳೇ ಲವರ್ ತನ್ನ ಮಲಮಗನ ಶಿಕ್ಷಣದ ಖರ್ಚಿಗಾಗಿ ಮಸ್ಕ್​ ಜತೆಗಿನ ಹಳೆಯ ಫೋಟೋಗಳನ್ನು ಹರಾಜಿಗಿಟ್ಟಿದ್ದಾಳೆ. ಜೆನ್ನಿಫರ್​ ಗ್ವಿನ್ನೆ ಫೋಟೋ ಹರಾಜಿಗಿಟ್ಟಾಕೆ.

ಜೆನ್ನಿಫರ್​ ತನ್ನ 20ನೇ ವಯಸ್ಸಿನಲ್ಲಿ ಪೆನಿಸಿಲ್ವೇನಿಯಾ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಎಲಾನ್​ ಮಸ್ಕ್ ಜತೆ ಅಫೇರ್ ಹೊಂದಿದ್ದಳು. ಪ್ರೀತಿಯಲ್ಲಿದ್ದ ಇಬ್ಬರೂ ಬಳಿಕ ಪ್ರತ್ಯೇಕಗೊಂಡಿದ್ದರು. ಆದರೆ ಈಗ 48ರ ವಯಸ್ಸಿನ ಜೆನ್ನಿಫರ್​ ತನ್ನ ಮಲಮಗನ ಶಿಕ್ಷಣದ ಖರ್ಚಿಗಾಗಿ ಮಸ್ಕ್​ ಜತೆಗಿನ ಅಂದಿನ ಸುಂದರಕ್ಷಣಗಳ ಫೋಟೋಗಳನ್ನು ಹರಾಜಿಗಿಟ್ಟಿದ್ದಾಳೆ.

ಈ ಫೋಟೋಗಳಲ್ಲಿ ಮಸ್ಕ್​ ಮತ್ತು ಜೆನ್ನಿಫರ್​ ಜತೆಗಿದ್ದಾರೆ. ಕಾಲೇಜು ಕ್ಯಾಂಪಸ್, ಕಂಪ್ಯೂಟರ್ ಮುಂದೆ, ಕೋಣೆಗಳಲ್ಲಿ ತಾವು ಒಟ್ಟಿಗಿದ್ದಾಗ ತೆಗೆದುಕೊಂಡಿದ್ದ ಫೋಟೋಗಳನ್ನು ಆರ್​ಆರ್ ಆಕ್ಷನ್ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದ್ದು, ಬಹುತೇಕ ಫೋಟೋಗಳ ಹರಾಜು 100 ಡಾಲರ್​ನಿಂದ ಆರಂಭವಾಗಿದೆ. ಮಸ್ಕ್​ ಆಕೆಯ ಜನ್ಮದಿನದಂದು ನೀಡಿದ್ದ ಸಹಿ ಮಾಡಿದ್ದ ಬರ್ತ್​ಡೇ ಕಾರ್ಡ್​ ಸಹಿತ 18 ಫೋಟೋಗಳನ್ನು ಹರಾಜಿಗೆ ಇಡಲಾಗಿದೆ.

ತಮ್ಮ ಅಂದಿನ ದಿನಗಳು ಮಧುರವಾಗಿದ್ದವು, ಆದರೆ ಅಂಥ ಪ್ರೀತಿಪೂರ್ವಕವಾಗೇನೂ ಇರಲಿಲ್ಲ. 1994ರ ಸುಮಾರಿಗೆ ನಾವು ಹತ್ತಿರವಾಗಿದ್ದೆವು, 1995ರಲ್ಲಿ ಮಸ್ಕ್​ ಜೀವನದಲ್ಲಿ ಪಾಲೊ ಅಲ್ಟೊ ಆಗಮನದ ಬಳಿಕ ನಾವು ಬೇರೆಯಾದೆವು ಎಂದು ಜೆನ್ನಿಫರ್ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net