ಸರ್ಕಾರಿ ಕಾರ್ನರ್: ಒಡಹುಟ್ಟಿದವರಿಗೆ ಪಿಂಚಣಿ ಲಭ್ಯವಾಗದು..

corner
Published on

ದಿನದ ಪ್ರಶ್ನೆ

ನನ್ನ ತಂದೆ, ತಾಯಿ ಇಬ್ಬರೂ ಮರಣ ಹೊಂದಿದ್ದು, ನಾನು ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ್ದೇನೆ. ನಾನು ಅವಿವಾಹಿತಳಾಗಿದ್ದು, ನನಗೆ 45 ವರ್ಷ ವಯಸ್ಸಿನ ತಂಗಿ ಇದ್ದಾಳೆ. ಆಕೆಯೂ ಅವಿವಾಹಿತಳಾಗಿದ್ದು, ಅವಳು ನನ್ನ ಮೇಲೆಯೇ ಅವಲಂಬಿತಳಾಗಿದ್ದಾಳೆ. ನನ್ನ ಮರಣಾನಂತರ ಅವಳಿಗೆ ಪಿಂಚಣಿ ಸಿಗುವುದೇ?

| ರಾಣಿ ಶಿವಮೊಗ್ಗ

2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಾವಳಿಯ ನಿಯಮ 9(ಡಿ) ರಂತೆ ನಿವೃತ್ತ ನೌಕರರು ನಿಧನರಾದರೆ ಆತನ/ಆಕೆಯ ಮಗನಿಗೆ 18 ವರ್ಷ, ಮಗಳಿಗೆ 21 ವರ್ಷ ಆಗುವವರೆಗೆ ಕುಟುಂಬ ಪಿಂಚಣಿ ಲಭ್ಯವಾಗುತ್ತದೆ. ಆದರೆ, ನಿವೃತ್ತ ನೌಕರನ ಅವಲಂಬಿತರಾದ ಸಹೋದರ ಅಥವಾ ಸಹೋದರಿಗೆ ಕುಟುಂಬ ಪಿಂಚಣಿ ದೊರಕುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net