ಸರ್ಕಾರಿ ಕಾರ್ನರ್: ಅನುಕಂಪದ ನೇಮಕಕ್ಕಿಲ್ಲ ಆದಾಯಮಿತಿ

corner
Published on

ದಿನದ ಪ್ರಶ್ನೆ

ಸರ್ಕಾರಿ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿದ್ದ ನಮ್ಮ ತಂದೆ, 2022ರ ಜೂನ್​ನಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿಧನ ಹೊಂದಿದ್ದಾರೆ. ನಮ್ಮ ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಮಾಸಿಕ 51,000 ರೂ. ವೇತನ ಪಡೆಯುತ್ತಿದ್ದಾರೆ. ನಾನು ಪದವೀಧರನಾಗಿದ್ದು, ಅನುಕಂಪದ ಆಧಾರದ ಹುದ್ದೆಗೆ ಅರ್ಹನೇ?

| ಸುನಿಲ್ ಮಡಿಕೇರಿ

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಾವಳಿ ನಿಯಮ 3ರ ರೀತ್ಯಾ ನೀವು ಅರ್ಹರಾಗಿದ್ದೀರಿ. ದಿನಾಂಕ: 9.4.2021ರಿಂದ ಸಿ ಅಥವಾ ಡಿ ಗುಂಪಿನ ನೌಕರರು ಕರ್ತವ್ಯದಲ್ಲಿರುವಾಗ ನಿಧನ ಹೊಂದಿದರೆ, ನಿಯಮ 4ರ ಉಪಬಂಧದ ಆದಾಯ ಮಿತಿ ರದ್ದುಗೊಳಿಸುವ ತಿದ್ದುಪಡಿ ಮಾಡಲಾಗಿದೆ. ನಿಮ್ಮ ತಾಯಿಯ ಆದಾಯವನ್ನು ಪರಿಗಣಿಸದೇ ಇರುವುದರಿಂದ ನೀವು ಅನುಕಂಪದ ನೇಮಕಾತಿ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net