

ದಿನದ ಪ್ರಶ್ನೆ
ಒಬ್ಬ ಸರ್ಕಾರಿ ನೌಕರನ ವಿರುದ್ಧ 2020ರಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಯು ಏಕಕಾಲದಲ್ಲಿ ಒಂದೇ ಆರೋಪ ಸಂಬಂಧ ಇಲಾಖಾ ವಿಚಾರಣೆ ಕಾಯ್ದಿರಿಸಿರುವುದಲ್ಲದೆ, ಎರಡು ಕ್ರಿಮಿನಲ್ ದಾವೆ ದಾಖಲಿಸಿದ್ದಾರೆ. ಆದರೆ, 4 ವರ್ಷವಾದರೂ ಈವರೆಗೆ ಇಲಾಖಾ ವಿಚಾರಣೆಯಾಗಲಿ, ಕ್ರಿಮಿನಲ್ ದಾವೆಯಾಗಲಿ ಇತ್ಯರ್ಥವಾಗಿಲ್ಲ. ಈ ಸಮಸ್ಯೆಗೆ ಸರ್ಕಾರಿ ನಿಯಮಾವಳಿಯಲ್ಲಿ ಪರಿಹಾರವಿದೆಯೇ?
| ಜವರೇಗೌಡ ಹಾಸನ
- 1957ರ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ ರೀತ್ಯಾ ಸರ್ಕಾರಿ ನೌಕರನ ವಿರುದ್ಧದ ಯಾವುದೇ ಇಲಾಖಾ ವಿಚಾರಣೆಯನ್ನು 6 ತಿಂಗಳೊಳಗೆ ಮುಗಿಸಬೇಕು. ಅಲ್ಲದೆ, ನಿಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯೂ ಕೂಡಲೇ ಇತ್ಯರ್ಥಗೊಳಿಸಬೇಕೆಂದು ಈ ನಿಯಮಾವಳಿ ತಿಳಿಸುತ್ತದೆ. ಹೀಗಿದ್ದರೂ ನಿಮ್ಮ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸದಿರುವುದು ಉದ್ದೇಶ ಪೂರ್ವಕ ನಿಧಾನ ಪ್ರವೃತ್ತಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ನೀವು ಸ್ವಾಭಾವಿಕ ನ್ಯಾಯವನ್ನು ಪಡೆಯಲು ನ್ಯಾಯಾಲಯದ ಮೋರೆ ಹೋಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.