

ದಿನದ ಪ್ರಶ್ನೆ
ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಈಗಾಗಲೆ ವೇತನಸಹಿತವಾಗಿ ಬಿ.ಎಸ್ಸಿ ಪದವಿ ಪೂರೈಸಿದ್ದೇನೆ. ಈಗ ಬಿ.ಇಡಿ ಮಾಡಲು ಮತ್ತೊಂದು ಅವಕಾಶವಿದೆಯೇ? ಅಥವಾ ಉನ್ನತ ವ್ಯಾಸಂಗಕ್ಕೆ ಸೌಲಭ್ಯ ಪಡೆಯಬಹುದೇ?
| ಶಿಲ್ಪಶ್ರೀ ಚಿಕ್ಕಮಗಳೂರು
ದಿನಾಂಕ: 02.09.2006ರ ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಸುತ್ತೋಲೆ ಸಂಖ್ಯೆ: ಸಿ3(2)/ಪ್ರಾ.ಶಿ/ಉವ್ಯಾ/2006-07ರಂತೆ ಬಿ.ಇಡಿ ಪದವಿ ಪಡೆಯಲು ವೇತನರಹಿತವಾಗಿ ರಜೆ ಪಡೆದು ಸ್ವಂತ ಖರ್ಚಿನಲ್ಲಿ ವ್ಯಾಸಂಗ ಮಾಡಬಹುದು. ಈ ಉನ್ನತ ವ್ಯಾಸಂಗದ ರಜೆಯನ್ನು ಕರ್ತವ್ಯರಹಿತ ದಿನಗಳೆಂದು ಪರಿಗಣಿಸಲಾಗುತ್ತದೆ.