

ನಾನು ಸಮಾಜ ಕಲ್ಯಾಣ ಇಲಾಖೆಯ ಕಾಯಂ ನೌಕರನಾಗಿದ್ದು, ಈಗ ಅಗ್ನಿಶಾಮಕ ತುರ್ತುಸೇವಾ ಇಲಾಖೆಯಲ್ಲಿ ಚಾಲಕ ಹುದ್ದೆಗೆ ಆಯ್ಕೆಯಾಗಿದ್ದೇನೆ. ಈ ಹುದ್ದೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿರುತ್ತೇನೆ. ಆದ್ದರಿಂದ 252 (ಬಿ) ಕೆಸಿಆರ್ ನಿಯಮದ ಪ್ರಕಾರ ನನ್ನ ಹುದ್ದೆಯನ್ನು ಎರಡು ವರ್ಷಗಳ ಕಾಲ ಕಾಯ್ದಿರಿಸಲು ಮತ್ತು ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮರಳಿ ಮೂಲ ಇಲಾಖೆಗೆ ಬರಲು ಅನುಮತಿ ಇದೆಯೇ?
| ಶ್ರೀನಿವಾಸ ರೆಡ್ಡಿ ಬಿಸಾಲವಾಡಗಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 20(4)ರ ಮೇರೆಗೆ ನೀವು ಸಮಾಜ ಕಲ್ಯಾಣ ಇಲಾಖೆಗೆ ಎರಡು ವರ್ಷಗಳೊಳಗೆ ವಾಪಸ್ ಹೋಗಬಹುದು. ಮೂಲ ಇಲಾಖೆಯ ನೇಮಕಾತಿ ಅಧಿಕಾರಿಗಳ ಒಪ್ಪಿಗೆ ಅವಶ್ಯ. ಇದಕ್ಕೆ ನೀವು ಮನವಿ ಸಲ್ಲಿಸಬಹುದು.