More

    ಇಬ್ಬರು ಸತ್ತರೂ ಸರಿಯಾಗದ ವಿದ್ಯುತ್​ ಪೂರೈಕೆ; ಐಸಿಯುನಲ್ಲಿದ್ದ ರೋಗಿಗಳು ಆಪರೇಷನ್​ ಥಿಯೇಟರ್​​ಗೆ ಸ್ಥಳಾಂತರ!

    ಬಳ್ಳಾರಿ: ಇಲ್ಲಿನ ವಿಮ್ಸ್​ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದ ಐಸಿಯುನಲ್ಲಿನ ವೆಂಟಿಲೇಟರ್​ ಸ್ಥಗಿತಗೊಂಡಿದ್ದರಿಂದಲೇ ಇಬ್ಬರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಇನ್ನೂ ವಿದ್ಯುತ್ ಪೂರೈಕೆ ಸರಿಯಾಗದೆ ಐಸಿಯುನಲ್ಲಿನ ರೋಗಿಗಳನ್ನು ಆಪರೇಷನ್​ ಥಿಯೇಟರ್​ಗೆ ಸ್ಥಳಾಂತರಿಸಿರುವ ಬೆಳವಣಿಗೆಯೂ ನಡೆದಿದೆ.

    ವಿದ್ಯುತ್ ಸಂಪರ್ಕ ಕಡಿತಗೊಂಡು ವೆಂಟಿಲೇಟರ್ ಕಾರ್ಯನಿರ್ವಹಿಸದ್ದರಿಂದ ಐಸಿಯುನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದು, ಇಬ್ಬರ ಸಾವಿನ ನಂತರ ಎಚ್ಚೆತ್ತುಕೊಂಡ ವಿಮ್ಸ್ ಆಡಳಿತ ಮಂಡಳಿ, ಐಸಿಯುನಲ್ಲಿದ್ದ ಹತ್ತಕ್ಕೂ ಅಧಿಕ ರೋಗಿಗಳನ್ನು ಆಪರೇಷನ್ ಥಿಯೇಟರ್​ಗೆ ಸ್ಥಳಾಂತರಿಸಿದೆ.

    ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮ್ಸ್ ನಿರ್ದೇಶಕ ಗಂಗಾಧರಗೌಡ ಸ್ಪಷ್ಟನೆ ನೀಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ರೋಗಿಗಳು ಸಾವಿಗೀಡಾಗಿಲ್ಲ ಎಂದು ತಿಳಿಸಿದ್ದಾರೆ. ಈ ದಿನ ವಿಮ್ಸ್ ಆಸ್ಪತ್ರೆಯಲ್ಲಿ ಆಗಿರುವ ಸಾವುಗಳು ವಿವಿಧ ತೀವ್ರತರದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿವೆ. ಒಬ್ಬ ರೋಗಿ ವಿಷಪೂರಿತ ಹಾವಿನ ಕಡಿತದಿಂದ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದರೆ. ಇನ್ನೊಬ್ಬ ಬಹು ಅಂಗಾಗ ವೈಫಲ್ಯಕ್ಕೆ ಒಳಗಾಗಿದ್ದು, ಕೊನೆಗೆ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿರುತ್ತಾರೆ.

    ವಿಮ್ಸ್ ಆಸ್ಪತ್ರೆಯು ಉನ್ನತ ಚಿಕಿತ್ಸಾ ಕೇಂದ್ರವಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಕೊನೆಗೆ ಪರಿಸ್ಥಿತಿ ಉಲ್ಬಣಗೊಂಡ ನಂತರ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದರಿಂದ ಸಾವುಗಳು ಆಗುವ ಸಂಭವನೀಯತೆ ಹೆಚ್ಚಾಗುತ್ತದೆ. ಬೆಳಗ್ಗೆ ಅದೇ ಸಮಯದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿರುವುದು ಕಾಕತಾಳೀಯವಾಗಿದೆ ಎಂದು ಸ್ಪಷ್ಟೀಕರಿಸಿದ್ದಾರೆ.

    ವೆಂಟಿಲೇಟರ್ ಸ್ಥಗಿತಗೊಂಡು ಆಸ್ಪತ್ರೆಯಲ್ಲಿದ್ದ ಇಬ್ಬರು ರೋಗಿಗಳು ಒಂದೇ ಸಮಯದಲ್ಲಿ ಸಾವು!?

    ಲವ್ ಜಿಹಾದ್​ ಪ್ರಕರಣ: ಪ್ರೀತಿಸಿದವನನ್ನೇ ಮದ್ವೆ ಆಗಲು ಹೊರಟ ಯುವತಿ, ತನ್ನ ಒಪ್ಪಿಗೆ ಇದೆ ಎಂದ ತಾಯಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts