

ನಮ್ಮ ತಂದೆ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಾಗ ನಿಧನ ಹೊಂದಿದ್ದಾರೆ. ಅವರ ನಿಧನಾನಂತರ ನನ್ನ ಹಿರಿಯ ಸಹೋದರನಿಗೆ ಅನುಕಂಪದ ಮೇಲೆ ನೇಮಕ ದೊರೆಯಿತು. ನನ್ನ ಹಿರಿಯ ಸಹೋದರ ದಿನಾಂಕ 20.9.2022ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ನನ್ನ ಹಿರಿಯ ಸಹೋದರನ ನಿಧನದಿಂದ ಅವನನ್ನು ಅವಲಂಬಿತನಾದ ನನಗೆ ಅನುಕಂಪದ ನೌಕರಿ ದೊರಕುತ್ತದೆಯೇ?
| ದೇವರಾಜು ಮಂಡ್ಯ
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರ ಮೇಲೆ ನೇಮಕಾತಿ) ನಿಯಮಾವಳಿ 1996ರ ನಿಯಮ 3ರ ರೀತ್ಯ ಅವಿವಾಹಿತ ಸಹೋದರನು ಅನುಕಂಪ ಆಧಾರದ ಮೇಲೆ ನೇಮಕವಾಗಲು ಅರ್ಹನಾಗಿರುತ್ತಾನೆ. ಆದ ಕಾರಣ ನೀವು ಈ ನಿಯಮಾವಳಿ ರೀತ್ಯ ಅನುಕಂಪ ಆಧಾರದ ನೇಮಕಕ್ಕೆ ಸಕ್ಷಮ ಪ್ರಾಧಿಕಾರಿಗೆ ಮನವರಿಗೆ ಮಾಡಿಸಿ, ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.