ಸರ್ಕಾರಿ ಕಾರ್ನರ್: ಅನುಕಂಪದ ನೇಮಕಾತಿ ನಿಯಮಾವಳಿ

corner
Published on

ದಿನದ ಪ್ರಶ್ನೆ

ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ, 2022ರ ಆಗಸ್ಟ್ 27ರಂದು ನಿಧನರಾದರು. ನಾನು ಸಂಬಂಧಿತ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರನ್ನು ಭೇಟಿಯಾದಾಗ ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿಲ್ಲವೆಂದು ನನ್ನ ಮನವಿ ತಿರಸ್ಕರಿಸಿದ್ದಾರೆ. ನಾನು ಅನುಕಂಪ ಆಧಾರದ ಮೇಲೆ ನೇಮಕಗೊಳ್ಳಲು ಏನು ಮಾಡಬೇಕು?

| ಶ್ರವಣಕುಮಾರ್ ಉಡುಪಿ

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಗಳು 1996ರ ನಿಯಮ 3ರ ರೀತ್ಯ ಅನುದಾನಿತ ಸಂಸ್ಥೆೆಯ ಮೃತ ನೌಕರನ ಅವಲಂಬಿತರು ಅನುಕಂಪ ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ದಿನಾಂಕ 12.9.1996ರ ಅಧಿಸೂಚನೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಈ ನಿಯಮಾವಳಿ ಅನ್ವಯಿಸಲಾಗಿದೆ. ಆದ ಕಾರಣ ನೀವು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಮತ್ತೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net