ಸರ್ಕಾರಿ ಕಾರ್ನರ್: ಸರ್ಕಾರಿ ವಸತಿಗೃಹ ಬಳಕೆ ನಿಯಮಾವಳಿ

corner
Published on
ದಿನದ ಪ್ರಶ್ನೆ 

ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿದ್ದ ನನಗೆ ಪಿಎಸ್​ಐ ಹುದ್ದೆಗೆ ಪದೋನ್ನತಿ ಸಿಕ್ಕಿದ್ದು, ವಿಜಯಪುರದಿಂದ ವಿಜಯನಗರಕ್ಕೆ ಸ್ಥಳ ನಿಯುಕ್ತಿಗೊಂಡಿರುತ್ತೇನೆ. ನನಗೆ ಈ ಹಿಂದೆ ಹಂಚಿಕೆಯಾಗಿರುವ ಪೊಲೀಸ್ ವಸತಿಗೃಹದಲ್ಲಿ ಎಷ್ಟು ಅವಧಿಯವರೆಗೆ ಮುಂದುವರಿಯಬಹುದು? ಈ ಬಗ್ಗೆ ಇರುವ ನಿಯಮಗಳೇನು?

| ಎಂ.ಎಂ. ಬಿರಾದರ ವಿಜಯಪುರ

ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಪರಿಶಿಷ್ಟ 4ರಲ್ಲಿನ ನಿಯಮ 29 (2ಎ)ಪ್ರಕರಾರ ಒಂದು ತಿಂಗಳೊಳಗಾಗಿ ವಸತಿಗೃಹವನ್ನು ಖಾಲಿ ಮಾಡಲು ಅವಕಾಶ ನೀಡಲಾಗುತ್ತದೆ. ಒಂದು ತಿಂಗಳಿಗಿಂತ ಹೆಚ್ಚು ಸಮಯ ಉಳಿದುಕೊಂಡಲ್ಲಿ ನಿಮ್ಮ ವಸತಿಗೃಹದ ಬಾಡಿಗೆ/ಲೈಸೆನ್ಸ್ ಶುಲ್ಕವನ್ನು ಮೂರರಷ್ಟು ವಿಧಿಸಬಹುದು. 3 ತಿಂಗಳಿಗಿಂತ ಹೆಚ್ಚಾದಲ್ಲಿ ವಸತಿಗೃಹವನ್ನು ಖಾಲಿಮಾಡದಿದ್ದರೆ ಲೋಕೋಪಯೋಗಿ ಇಲಾಖೆಯು ಅಗತ್ಯ ಕ್ರಮಕೈಗೊಂಡು ಖಾಲಿ ಮಾಡಿಸಬಹುದು ಹಾಗೂ 5ರಷ್ಟು ಲೈಸೆನ್ಸ್ ಶುಲ್ಕ ವಿಧಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net