

ಬೆಂಗಳೂರು: ಸರ್ಗಮ್ಪ್ರೇಮಿ ಮಿತ್ರ ಮಂಡಲ ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಇತ್ತೀಚೆಗೆ ಎರಡು ದಿನಗಳ ಸರ್ಗಮ್ ಸಂಗೀತ ಮಹೋತ್ಸವ 2023ನ್ನು ಆಯೋಜಿಸಿತ್ತು. ಖ್ಯಾತ ಗಾಯಕಿ ಸುಜಾತ ಗುರವ್ ಕಮ್ಮಾರ್ ಅವರ ಗಾಯನ ಹಾಗೂ ಖ್ಯಾತ ಸಿತಾರ್ ವಾದಕ ಉಸ್ತಾದ ಶಫಿಕ್ ಖಾನ್ ಅವರ ಸಿತಾರ್ ವಾದನ ಮೆಚ್ಚುಗೆ ಗಳಿಸಿದವು. ಅಂಗಡಿ ಗಾಯಕವಾಡ್ (ಹಾರ್ಮೋನಿಯಂ) ಮತ್ತು ಪಾಂಡುರಂಗ ಪವಾರ್ (ತಬಲಾ) ಸಾಥ್ ನೀಡಿದರು.
ಅಹಮದ್ನಗರದ ಮೌಲಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಸಂಗೀತ ಉತ್ಸವ ಯಶಸ್ವಿಯಾಗಿ ಜರುಗಿದ್ದು, ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.