'ಅನಿಮಲ್': ನಟಿ ತ್ರಿಪ್ತಿ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಬಾಲಿವುಡ್​ನ ಈ ಖ್ಯಾತ ನಟಿ! ನಿರ್ದೇಶಕರ ತಿರಸ್ಕಾರಕ್ಕೆ ಇದೇ ಕಾರಣ?

ವಿಜಯವಾಣಿ (16)
Published on

ಮುಂಬೈ: ಡಿ. 01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ನಟ ರಣಬೀರ್​ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿನ 'ಅನಿಮಲ್' ಚಿತ್ರ​ ಸದ್ಯ ಬಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ರಿಲೀಸ್ ಆದ ಮೊದಲ ದಿನದಿಂದಲೂ ಸಿಕ್ಕಾಪಟ್ಟೆ ಸದ್ದು-ಗದ್ದಲ ಎಬ್ಬಿಸಿರುವ ರಣಬೀರ್​ ಚಿತ್ರ ಇದೀಗ ಮತ್ತೊಂದು ಕುತೂಹಲಕಾರಿ ಸಂಗತಿ ಮೂಲಕ ಸುದ್ದಿಯಾಗುತ್ತಿದೆ.

ಸದ್ಯ ಅನಿಮಲ್ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡಿದ್ದೇ ಆದ್ರೂ, ಸಿನಿಪ್ರೇಕ್ಷಕರಿಂದ ವ್ಯಾಪಕ ನೆಗಟಿವ್ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿದೆ. ಕಳೆದ ಹಲವು ದಿನಗಳಿಂದ ಚಿತ್ರದ ಬಗ್ಗೆ ಒಂದಲ್ಲ ಒಂದು ಸುದ್ದಿ ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿದ್ದು, ಇದೀಗ ಮತ್ತೊಂದು ಸಂಗತಿ ಅದೇ ರೀತಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಣಬೀರ್​-ರಶ್ಮಿಕಾ ಪಾತ್ರಗಳಿಂತ ಹೆಚ್ಚು ಗಮನ ಸೆಳೆದಿರುವ ನಟಿ ತ್ರಿಪ್ತಿ ದಾಮ್ರಿ ರೋಲ್​ಗೆ ಬಾಲಿವುಡ್​ನ ಖ್ಯಾತ ನಟಿ ಮುಂಚಿತವಾಗಿಯೇ ಆಯ್ಕೆಯಾಗಿದ್ದರು ಎನ್ನಲಾಗಿದೆ.

ಆ ಪಾತ್ರಕ್ಕೆ ತ್ರಿಪ್ತಿಗಿಂತ ಮೊದಲು ಆಯ್ಕೆಯಾಗಿದ್ದು ಬಾಲಿವುಡ್​ನ ನಟಿ ಸಾರಾ ಅಲಿ ಖಾನ್! ಇದಕ್ಕಾಗಿ ಪಾತ್ರದ ಆಡಿಷನ್ ಕೂಡ ಮಾಡಲಾಗಿತ್ತು. ಆದ್ರೆ, ಸಾರಾ ಅವರು ಈ ರೋಲ್ ಮಾಡಲು ಕಷ್ಟವಾಗಬಹುದು ಎಂದು ಯೋಚಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ನಟಿಯನ್ನು ರಿಜೆಕ್ಟ್​ ಮಾಡುವ ಮೂಲಕ ಕೈಬಿಟ್ಟರು ಎನ್ನಲಾಗಿದೆ.

ಮಾಹಿತಿ ಪ್ರಕಾರ, ಸಾರಾ ಪಾತ್ರದಲ್ಲಿನ ನಕಾರಾತ್ಮಕ ಪಾತ್ರ ಮತ್ತು ಧೈರ್ಯವನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದ ಸಂದೀಪ್, ಸಾರಾ ಬದಲಿಗೆ ತ್ರಿಪ್ತಿ ಅವರನ್ನು ಆಯ್ಕೆ ಮಾಡಿಕೊಂಡರು. ತೆರೆಯ ಮೇಲೆ ನಟಿಯ ಬೋಲ್ಡ್ ಲುಕ್​​​ ಹಾಗೂ ನಟನೆ ಇದೀಗ ಸಿನಿಮಾದ ಪ್ರಮುಖ ವಿಷಯಗಳಾಗಿದ್ದು, ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net