ವೃದ್ಧನಿಗೆ ಚಪ್ಪಲಿ ಹಾರ ಹಾಕಿ, ಉಗುಳು ನೆಕ್ಕು ಎಂದ ಪುಂಡರ ಗ್ಯಾಂಗ್ ಅರೆಸ್ಟ್​​!

ವೃದ್ಧನಿಗೆ ಚಪ್ಪಲಿ ಹಾರ ಹಾಕಿ, ಉಗುಳು ನೆಕ್ಕು ಎಂದ ಪುಂಡರ ಗ್ಯಾಂಗ್ ಅರೆಸ್ಟ್​​!
Published on

ಉತ್ತರಪ್ರದೇಶ: 75 ವರ್ಷ ವಯಸ್ಸಿನ ವೃದ್ಧನಿಗೆ ತನ್ನ ಉಗುಳನ್ನೇ ನೆಕ್ಕಲು ಹೇಳಿ, ಚಪ್ಪಲಿ ಹಾರವನ್ನು ಧರಿಸುವಂತೆ ಒತ್ತಾಯಿಸಿದ ಪುಂಡರು, ವ್ಯಕ್ತಿಗೆ ಹಿಂಸಿಸಿದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಘಟನೆ ಉತ್ತರಪ್ರದೇಶದ ಸಿದ್ಧಾರ್ಥನಗರದಲ್ಲಿ ವರದಿಯಾಗಿದೆ.

75 ವರ್ಷದ ವ್ಯಕ್ತಿಯೊಬ್ಬರಿಗೆ ಬಲವಂತವಾಗಿ ಚಪ್ಪಲಿ ಹಾರ ಹಾಕಿದ ಪುಂಡರ ಗ್ಯಾಂಗ್​, ತನ್ನದೇ ಉಗುಳನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ. ವೃದ್ಧನನ್ನು ಮೊಹಬ್ಬತ್ ಅಲಿ ಎಂದು ಗುರುತಿಸಲಾಗಿದ್ದು, ಅವರ ಮುಖಕ್ಕೆ ಮಸಿ ಬಳೆದು ಮೆರವಣಿಗೆ ಕೂಡ ಮಾಡಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಘಟನೆ ಗುರುವಾರ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತೋರಿಸಿರುವ ವೀಡಿಯೊ ಮೂಲಕ ಘಟನೆ ಬೆಳಕಿಗೆ ಬಂದಿದೆ. ತೊಂದರೆಗೆ ಸಿಲುಕಿದ ವ್ಯಕ್ತಿ ತಿಘರಾ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಅಲಿ ವಿರುದ್ಧ ವ್ಯಕ್ತಿಯೊಬ್ಬರು ತನ್ನ ಮಗಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ದೂರು ದಾಖಲಾದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಸದ್ಯ ಅಲಿಗೆ ಹಿಂಸೆ ನೀಡಿದ ನಾಲ್ವರನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಆರೋಪಿಗಳನ್ನು ಜಾಫರ್, ಅಮನ್ ಪಾಂಡೆ, ಅಖಿಲೇಶ್ ಸಾಹ್ನಿ ಮತ್ತು ಘನಶ್ಯಾಮ್ ತಿವಾರಿ ಎಂದು ಗುರುತಿಸಲಾಗಿದೆ ಎಂದು ಗೋಲ್ಹೌರಾ ಪೊಲೀಸ್ ಠಾಣೆ ಎಸ್‌ಎಚ್‌ಒ ಅಜಯನಾಥ್ ಕನೌಜಿಯಾ ತಿಳಿಸಿದ್ದಾರೆ. ಈ ನಾಲ್ವರ ವಿರುದ್ಧ ಅಕ್ರಮ ಸಂಯಮ, ನೋವುಂಟು ಮಾಡುವುದು, ಮನೆ ಒಡೆಯುವುದು, ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net