More

    19 ವಯೋಮಿತಿಯ ಏಷ್ಯಾಕಪ್ ಭಾರತ ಕಿರಿಯರ ತಂಡ ಶುಭಾರಂಭ: ಅರ್ಶಿನ್ ಕುಲಕರ್ಣಿ ಆಲ್ರೌಂಡ್ ಆಟ, 6 ವಿಕೆಟ್ ಕಬಳಿಸಿದ ಪಾಕ್ ವೇಗಿ

    ದುಬೈ: ಉದಯೋನ್ಮೂಖ ಆಲ್ರೌಂಡರ್ ಅರ್ಶಿನ್ ಕುಲಕರ್ಣಿ (70* ರನ್, 105 ಎಸೆತ, 4ಬೌಂಡರಿ ಹಾಗೂ 29ಕ್ಕೆ3 ವಿಕೆಟ್) ಆಲ್ರೌಂಡ್ ಆಟದ ನೆರವಿನಿಂದ ಭಾರತ 19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಕಿರಿಯರ ತಂಡ, ಅ್ಘಾನಿಸ್ತಾನ ಎದುರು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

    ಐಸಿಸಿ ಕ್ರಿಕೆಟ್ ಆಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಅ್ಘಾನಿಸ್ತಾನ ಭರ್ತಿ 50 ಓವರ್‌ಗಳಲ್ಲಿ 173 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಅರ್ಶಿನ್ ಕುಲಕರ್ಣಿ ಹಾಗ ಮುಶೀರ್ ಖಾನ್ (48*) ಜೋಡಿ ಮುರಿಯದ 4ನೇ ವಿಕೆಟ್‌ಗೆ ಕಲೆಹಾಕಿದ 98 ರನ್‌ಗಳ ಬಲದಿಂದ ಭಾರತ 37.3 ಓವರ್‌ಗಳಲ್ಲಿ 174 ರನ್‌ಗಳಿಸಿ ಸುಲಭ ಗೆಲುವ ದಾಖಲಿಸಿದೆ.

    ಅ್ಘಾನಿಸ್ತಾನ: 50 ಓವರ್‌ಗಳಲ್ಲಿ 173 (ಜಮ್‌ಶಿದ್ ಜದ್ರಾನ್ 43, ಅಕ್ರಂ 20, ನೂಮನ್ 25, ಯೂನುಸ್ 26, ಅರ್ಶಿನ್ 29ಕ್ಕೆ3, ರಾಜ್ ಲಿಂಬಾನಿ 46ಕ್ಕೆ3, ನಮನ್ 30ಕ್ಕೆ2).
    ಭಾರತ: 37.3 ಓವರ್‌ಗಳಲ್ಲಿ 3 ವಿಕೆಟ್‌ಗೆ 174 (ಆದರ್ಶ್ ಸಿಂಗ್ 14, ಅರ್ಶಿನ್ 70*, ಉದಯ್ 20, ಮುಶೀರ್ 48*, ಖಲೀಲ್ 28ಕ್ಕೆ1).

    ಭಾರತಕ್ಕೆ ಮುಂದಿನ ಪಂದ್ಯ
    ಎದುರಾಳಿ: ಪಾಕಿಸ್ತಾನ
    ಯಾವಾಗ: ಡಿ.10,ಭಾನುವಾರ.

    ಪಾಕ್‌ಗೆ ಜಯ
    ಮೊಹಮದ್ ಜೀಶಾನ್ (19ಕ್ಕೆ3) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪಾಕಿಸ್ತಾನ ತನ್ನ ಆರಂಭಿಕ ಪಂದ್ಯದಲ್ಲಿ ನೇಪಾಳ ಎದುರು 7 ವಿಕೆಟ್ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ, 47.2 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಚೇಸಿಂಗ್ ನಡೆಸಿದ ಪಾಕ್, 26.2 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್‌ಗಳ ಗುರಿ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts