

ಮುಂಬೈ: ಫ್ಯಾಷನ್ ನಲ್ಲಿ ತನ್ನದೇ ಛಾಪು ಮೂಡಿಸಿರುವ ಬಾಲಿವುಡ್ ಬೆಡಗಿ ಇತ್ತೀಚೆಗೆ ತೊಟ್ಟಿರುವ ಡ್ರೆಸ್ ಬೆಲೆ ಗೊತ್ತಾದ್ರೆ ಎಂತಹವರೂ ಕಣ್ಣು ಹುಬ್ಬೇರಿಸುವುದಂತೂ ಖಚಿತ. ಸಾರಾ ಅಲಿ ಖಾನ್ ಪ್ಯಾಷನ್ ಷೋನಲ್ಲಿ ರ‍್ಯಾಂಪ್‌ಮೇಲೆ ನಡೆಯುವಾಗ ಬ್ರೈಡಲ್ ರೆಡ್ ಅನ್ನು ಆಯ್ಕೆಮಾಡಿಕೊಂಡಿದ್ದಳು. ಆಕೆ ರಾಜಾಸ್ತಾನಿ ಸಾಂಪ್ರದಾಯಿಕ ಉಡುಗೆಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾದ ಪುನೀತ್ ಬಲಾನ ತಯಾರಿಸಿದ ಬ್ರೈಡಲ್ ರೆಡ್ ವಧುವಿನ ವಸ್ತ್ರ ಧರಿಸಿದ್ದು, ಅದರ ಬೆಲೆ ಬರೋಬ್ಬರಿ 1,55,000 ರೂ.ಗಳಾಗಿತ್ತು.
ಈ ದುಬಾರಿ ಡ್ರೆಸ್ ದರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಾರಾ, ಸೆಲಬ್ರಿಟಿಗಳು ಚಿಕ್ಕ ವಸ್ತುಗಳಿಗೂ ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತಾರೆ. ಆದರೆ ನಾನು ಯಾವುದಕ್ಕೂ ಅಷ್ಟಾಗಿ ಖರ್ಚು ಮಾಡುವುದಿಲ್ಲ. ಮುಖ್ಯವಾಗಿ ದೊಡ್ಡ ದೊಡ್ಡ ಸಭೆ, ಸಮಾರಂಭಗಳು, ಷೋಗಳಿಗೆ ಬಾಡಿಗೆ ಬಟ್ಟೆ ದರಿಸಿಯೇ ಹೋಗುತ್ತೇನೆ ಎನ್ನುತ್ತಾರೆ ಈ ಪ್ರತಿಭಾವಂತ ನಟಿ.
ಇನ್ನು ಸಾರಾಗೆ ಪ್ರತ್ಯೇಕ ಉಡುಗೆ ತಯಾರಿಸಿಕೊಟ್ಟ ಪುನೀತ್ ಬಲಾನಾ ಹೇಳುವುದು ಹೀಗೆ "ವಾರ್ಡ್ರೋಬೋದ ನಮ್ಮ ಕಲೆಕ್ಷನ್, ನಮ್ಮ ಪ್ಯಾಷನ್ ಕುರಿತು ಮಾತ್ರವಲ್ಲ, ನಮ್ಮ ಬಗ್ಗೆ ತಿಳಿಸುತ್ತದೆ. ಎಲ್ಲದರಲ್ಲೂ ನಮ್ಮ ರಾಜಾಸ್ತಾನಿ ಸಂಸ್ಕೃತಿ ಅನಾವರಣಗೊಂಡಿರುತ್ತದೆ.ಸಾಂಪ್ರದಾಯ ಜೋಡಿಸಿದ ಡಿಸೈನ್ಸ್ ಆಗಿರುವುದರಿಂದ ಈ ಬ್ರಾಂಡ್ ಸೆಲಬ್ರಿಟಿಗಳ ಫೇವರರೆಟ್ ಆಗಿದೆ" ಎನ್ನುತ್ತಾರೆ.
ಇನದನಯ ಸಾರಾ ಅಲಿಖಾನ್ ಧರಿಸಿದ ಆಭರಣ ಜೈಪುರದ 8ತಲೆಮಾರಿನಿಂದ ನಡೆದು ಬಂದಿರುವ ಬ್ರಾಂಡ್ ಸತ್ಯನಾರಾಯಣ ಜಿ.ಮೋಸುನ್ ಸಂಸ್ಥೆಯದ್ದಾಗಿದ್ದು , ಅಂತಾರಾಷ್ಟ್ರೀಯ ಖ್ಯಾತಿ ಇದಕ್ಕಿದೆ.