ಸೀರೆಯಲ್ಲಿ ಸಪ್ತಮಿಗೌಡ ಶೈನಿಂಗ್‌: ವೈರಲ್​ ಆಗ್ತಿವೆ ಕಾಂತಾರದ ಲೀಲಾಳ ಕ್ಯೂಟ್‌ ಫೋಟೋಸ್..

sapthmi gowda
Published on

ಬೆಂಗಳೂರು: 'ಕಾಂತಾರʼದ ಸಿಂಗಾರ ಸಿರಿ ಸಪ್ತಮಿ ಗೌಡ ಕನ್ನಡ ಚಿತ್ರರಂಗದ ಭವಿಷ್ಯದ ನಟಿ. ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಪ್ತಮಿ ಸಧ್ಯ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿದ್ದಾರೆ. ಕಾಂತಾರದ ಲೀಲಾ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾದ ಸಪ್ತಮಿಗೌಡ ಅವರಿಗೆ ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಕಾಂತಾರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು. ಕಾಂತಾರ ಚಿತ್ರದಲ್ಲಿ ಸಪ್ತಮಿ ಅವರು ಲೀಲಾ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾಂತಾರ ನಂತರ, ಸಪ್ತಮಿ ವ್ಯಾಕ್ಸಿನ್‌ ವಾರ್‌ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಪ್ತಮಿ ಆಗಾಗ ಫೋಟೋ ಶೂಟ್‌ ಮೂಲಕ ಹೈಪ್‌ ಕ್ರಿಯೆಟ್‌ ಮಾಡುತ್ತಿರುತ್ತಾರೆ. ಸಧ್ಯ ಸಪ್ತಮಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಗಳು ಯುವಜನರಿಗೆ ತುಂಬಾ ಇಷ್ಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net