ನವದೆಹಲಿ: ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಆದರೆ ಆದಿವಾಸಿ ಸಮುದಾಯದ ಅಭ್ಯರ್ಥಿಯೊಬ್ಬರನ್ನು ಬಿಜೆಪಿ ಇದ್ದಕ್ಕಿದ್ದಂತೆ ಘೋಷಿಸಿಲ್ಲ. ಎಲ್ಲವೂ ಪಕ್ಷದ ಪೂರ್ವನಿರ್ಧಾರಿತ ಯೋಜನೆಯಂತೆ ಆಗಿದೆ. ಇದಕ್ಕೆ ಚುನಾವಣೆ ಪ್ರಾರಂಭವಾದ ಬಳಿಕ ನಡೆದ ಬೆಳವಣಿಗೆಗಳು ಇದನ್ನೇ ಹೇಳುತ್ತಿವೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ವಾರಗಳ ಮುಂಚೆ, ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ವಿಷ್ಣು ದೇವ್ ಸಾಯಿ ಮುಖ್ಯಮಂತ್ರಿಯಾಗುತ್ತಾರೆಂಬ ದೊಡ್ಡ ಸುಳಿವು ನೀಡಿದ್ದರು.
ಇದನ್ನೂ ಓದಿ:ಎಫ್ಐಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.ಅನೀಶ್ ಶಾ
ನಾವು ಅವರನ್ನು (ವಿಷ್ಣು ದೇವ್ ಸಾಯಿ) ದೊಡ್ಡ ಮನುಷ್ಯನನ್ನಾಗಿ ಮಾಡುತ್ತೇವೆ ಎಂದು ಚುನಾವಣಾ ಸಮಾವೇಶದಲ್ಲಿ ಅಮಿತ್ ಶಾ ಹೇಳಿದ್ದರು. ಅದು ಈಗ ನಿಜವಾಗಿದೆ.
ಪ್ರಮುಖ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಅವರನ್ನು ಉನ್ನತ ಹುದ್ದೆಗೆ ಹೆಸರಿಸುವ ಮೂಲಕ ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ಆಯ್ಕೆಯ ಮೇಲಿನ ಸಸ್ಪೆನ್ಸ್ ಅನ್ನು ಬಿಜೆಪಿ ಭಾನುವಾರ ಕೊನೆಗೊಳಿಸಿದೆ.
“ಆಪ್ ಇಂಕೋ (ವಿಷ್ಣು ದೇವ್ ಸಾಯಿ) ವಿಧಾಯಕ್ ಬನಾಡೋ, ಉಂಕೋ ಬಡಾ ಆದ್ಮಿ ಬನಾನೇ ಕಾ ಕಾಮ್ ಹಮ್ ಕರೇಂಗೆ (“ನೀವು ಅವರನ್ನು ಶಾಸಕರನ್ನಾಗಿ ಮಾಡಿ, ನಾವು ಅವರನ್ನು ದೊಡ್ಡ ವ್ಯಕ್ತಿಯಾಗಿ ಮಾಡುತ್ತೇವೆ” ಎಂದು ಷಾ ಕುಂಕೂರಿನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದ್ದರು. ಕಾಂಗ್ರೆಸ್‌ನ ಹಾಲಿ ಶಾಸಕ ಯುಡಿ ಮಿಂಜ್ ಅವರನ್ನು 25,541 ಮತಗಳ ಅಂತರದಿಂದ ವಿಷ್ಣು ದೇವ್ ಸಾಯಿ ಸೋಲಿಸಿದ್ದರು. ಕುಂಕುರಿ ಕ್ಷೇತ್ರವು ಸುರ್ಗುಜಾ ವಿಭಾಗದಲ್ಲಿದ್ದು, ಅಲ್ಲಿ ಬಿಜೆಪಿ ಎಲ್ಲ 14 ಕ್ಷೇತ್ರಗಳನ್ನು ಗೆದ್ದಿದೆ.
ರಾಯ್‌ಪುರದಲ್ಲಿರುವ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ಚುನಾಯಿತರಾದ 54 ಪಕ್ಷದ ಶಾಸಕರ ಸಭೆಯಲ್ಲಿ 59 ವರ್ಷದ ವಿಷ್ಣು ದೇವ್ ಸಾಯಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು.
“ಮುಖ್ಯಮಂತ್ರಿಯಾಗಿ, ನಾನು ಪ್ರಧಾನಿ ಮೋದಿಯವರ ಭರವಸೆಗಳನ್ನು (ಬಿಜೆಪಿಯ ಚುನಾವಣಾ ಪೂರ್ವ ಭರವಸೆಗಳು) ಸರ್ಕಾರದ ಮೂಲಕ ಈಡೇರಿಸಲು ಪ್ರಯತ್ನಿಸುತ್ತೇನೆ” ಎಂದು ಸಭೆಯ ನಂತರ ವಿಷ್ಣು ದೇವ್ ಸಾಯಿ ಹೇಳಿದರು.
ಸಾಯಿ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಕೇಂದ್ರ ಸಚಿವರಾಗಿದ್ದರು. ಪಕ್ಷದೊಳಗೆ ಹಲವು ಪ್ರಮುಖ ಹುದ್ದೆಗಳನ್ನೂ ಅಲಂಕರಿಸಿದ್ದರು. ಅವರು 2020 ರಿಂದ 2022 ರವರೆಗೆ ಛತ್ತೀಸ್‌ಗಢದ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದಾರೆ.
ಚೀನಾದ ನಿಗೂಢ ನ್ಯುಮೋನಿಯಾ ಭಾರತಕ್ಕೆ ಕಾಲಿಟ್ದೆಟಿತೇ?: ಶೀತ, ಗಂಟಲು, ಎದೆ, ತಲೆನೋವು ಕಡೆಗಣಿಸುವಂತಿಲ್ಲ…ಎಚ್ಚರ!