

ಬೆಂಗಳೂರು: ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಚಿತ್ರದ ರಿಲೀಸ್ ದಿನಾಂಕದಲ್ಲಿ ಇದೀಗ ಬದಲಾವಣೆ ಉಂಟಾಗಿದೆ. ಈ ಬಗ್ಗೆ ಸ್ವತಃ ರಕ್ಷಿತ್ ಅವರೇ ಅಧಿಕೃತವಾಗಿ ದೃಢಪಡಿಸಿದ್ದಾರೆ.
ಸೆ. 01 ರಂದು 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಸಿನಿಮಾದ ಸೈಡ್ ಎ ಭಾಗವನ್ನು ನೋಡಿದ್ದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದರು, ಈಗ ಸೈಡ್ ಬಿ ವೀಕ್ಷಿಸಲು ಸಿನಿಮಾದ ಬಿಡುಗಡೆಯತ್ತ ಕಾಯತೊಡಗಿದ್ದಾರೆ.
ಇದಕ್ಕೆ ಅನುಗುಣವಂತೆ ರಕ್ಷಿತ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಹಿಂದೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ರಿಲೀಸ್ ದಿನಾಂಕ ಅಕ್ಟೋಬರ್ 20 ರಂದು ಎಂದು ತಿಳಿಸಿದ್ದರು. ಆದ್ರೆ, ಆ ದಿನದಂದು ಚಿತ್ರ ಬಿಡುಗಡೆಯಾಗುವುದಿಲ್ಲ. ಬದಲಿಗೆ ಅ. 27 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಹಾಜರಾಗಲಿದೆ ಎಂಬ ಪೋಸ್ಟರ್ ಹಾಕುವ ಮುಖೇನ ಅಧಿಕೃತವಾಗಿ ತಿಳಿಸಿದ್ದಾರೆ.