ಎಲ್ಲಿವರೆಗೂ ಅಡಗಿಕುಳಿತುಕೊಳ್ಳುತ್ತೀರಾ...? ರೆಬೆಲ್​ ಶಾಸಕರಿಗೆ ಸಂಜಯ್​ ರಾವತ್​ ಸವಾಲ್​​!

Sanjay rawat
Published on

ಮುಂಬೈ: ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಹೊರಬರಲು ಶಿವಸೇನೆ ಶತಾಯ ಗತಾಯ ಪ್ರಯತ್ನ ಮಾಡುತ್ತಲೇ ಇದೆ. ಕೊನೇ ಗಳಿಗೆಯಲ್ಲಾದರೂ ಬಂಡಾಯ ಶಾಸಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆದರೆ ಶಿವಸೇನೆಯಿಂದ ಸಂಪೂರ್ಣ ಸಂಪರ್ಕ ಕಡಿದುಕೊಂಡಿರುವ ರೆಬೆಲ್​ ಶಾಸಕರಿಗೆ ಕೊನೆಯ ಬಾರಿ ಎಚ್ಚರಿಕೆ ನೀಡಿಲಾಗಿದೆ. ಎಷ್ಟು ದಿನಾ ಅಂತ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಾ, ಅಖಾಡಕ್ಕೆ ಬರಲೇಬೇಕಲ್ಲವೇ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ಟ್ವೀಟ್​ ಮಾಡಿದ್ದಾರೆ.

16 ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭಾ ಉಪಸಭಾಪತಿಯಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ಸೋಮವಾರ ಸಂಜೆಯೊಳಗೆ ಉತ್ತರಿಸಲೇಬೇಕಿದೆ. ಅದು ಯಾವ ರೀತಿ ಪ್ರತಿಕ್ರಿಯೆ ನೀಡುತ್ತೀರಾ ಎಂದು ಸವಾಲು ಎಸೆದಿದ್ದಾರೆ.

ಈ ಮಧ್ಯೆ ಗುವಾಹಟಿಯಲ್ಲೇ ಶಿವಸೇನೆ ಬಂಡಾಯ ಶಾಸಕರಿದ್ದು, ಕೆಲ ಬಂಡಾಯ ಶಾಸಕರಲ್ಲೇ ಕೆಲವು ಅಸಮಾಧಾನಗಳಿವೆ ಎಂದು ಶಿವಸೇನೆ ಆರೋಪಿಸಿದೆ. ಸದ್ಯ ಏಕನಾಥ್​ ಶಿಂಧೆ ಬಣ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದನ್ನು ನಾಳೆ ಸಂಜೆವರೆಗೂ ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net