ನೀವೇನಾದ್ರೂ ಮಾಡ್ಕೊಳಿ, ಆದರೆ ಬಾಳಾ​ಸಾಹೇಬ್​ಠಾಕ್ರೆ ಹೆಸರು ಬಳಸುವಂತಿಲ್ಲ: ರೆಬೆಲ್​ ಶಾಸಕರಿಗೆ ಉದ್ಧವ್​ ಎಚ್ಚರಿಕೆ

Udhav
Published on

ಮುಂಬೈ: ಸದ್ಯ ರಾಜಕೀಯ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಮಹಾರಾಷ್ಟ್ರ ಸರ್ಕಾರ ಸದ್ಯ ಪತನದ ಅಂಚಿನಲ್ಲಿದೆ. ಕೊನೆಯ ಹಂತದವರೆಗೂ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಉದ್ಧವ್​ ಠಾಕ್ರೆ ರೆಬೆಲ್​ ಶಾಸಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ನೀವೂ ಏನಾದರೂ ಮಾಡಿಕೊಳ್ಳಿ, ನಿಮಗೆ ಅನ್ನಿಸಿದ್ದನ್ನು ಮಾಡಿ ಆದರೆ ಬಾಳಾ ಸಾಹೇಬ್​ ಠಾಕ್ರೆ ಅವರ ಹೆಸರು ಮಾತ್ರ ಎಲ್ಲಿಯೂ ಬಳಸುವಂತಿಲ್ಲ ಎಂದು ರೆಬೆಲ್​ ಶಾಸಕರಿಗೆ ಹೇಳಿದ್ದಾರೆ.

ನಿಮ್ಮ ವಿಚಾರದ ಮಧ್ಯೆ ನಾನು ಬರುವುದಿಲ್ಲ. ನೀವು ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಲು ಅರ್ಹರಿದ್ದೀರಿ, ಆದರೆ ಬಾಳಾಸಾಹೇಬ್​ ಠಾಕ್ರೆ ಎಲ್ಲಿಯಾದರೂ ಬಳಸಿದ್ದು ಕಂಡುಬಂದರೆ ಸುಮ್ಮನಿರುವುದಿಲ್ಲ ಎಂದಿದ್ದಾರೆ.

ಬಾಳಾಸಾಹೇಬ್​ ಠಾಕ್ರೆ ಅವರ ನಿಜವಾದ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿರುವ ಏಕನಾಥ್​ ಶಿಂಧೆ ಬಣದ ಶಾಸಕ ದೀಪಕ್​ ಕೇಸರ್ಕರ್​ ಘೋಷಿಸಿದ್ದರು. ಒಡೆದ ಒಂದು ಗುಂಪು ಯಾವುದೇ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ ಎಂದು ಹೇಳಿದ್ದರು. ಇದೀಗ ಇದೇ ವಿಚಾರ ಉದ್ಧವ್​​ ಠಾಕ್ರೆಗೆ ಮತ್ತಷ್ಟು ಕೆಣಕುವಂತೆ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net