More

    ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!

    ಧಾರವಾಡ: ದಿನನಿತ್ಯ ಸಾವಿರಾರು ವಿಚ್ಛೇದನ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ಮದುವೆಯಾದ ತಿಂಗಳ ಒಳಗೇ ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಗಳೂ ಇವೆ.

    ಆದರೆ ಇಲ್ಲೊಂದು ಅಪರೂಪದಲ್ಲಿ ಅಪರೂಪ ಪ್ರಕರಣವೊಂದು ನಡೆದಿದ್ದು, ವಿಚ್ಛೇದನಕ್ಕೆ ಬಂದ ಗಂಡ-ಹೆಂಡತಿಯನ್ನು ನ್ಯಾಯಾಧೀಶರೇ ಒಂದು ಮಾಡಿದ್ದಾರೆ.ಧಾರವಾಡ ಕೌಟುಂಬಿಕ ನ್ಯಾಯಾಲಯದಲ್ಲಿ ಅಪರೂಪದ ರಾಜಿ ಸಂಧಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಸಾಕ್ಷಿಯಾಗಿದ್ದಾರೆ.

    ನಾಲ್ಕು ಮಕ್ಕಳಾದ ಬಳಿಕ ಗಂಡ ಹೆಂಡತಿಯಲ್ಲಿ ಬಂದಿದ್ದ ವೈಮನಸ್ಸು, 12 ವರ್ಷದ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು, ಬಾದಾಮಿ ತಾಲೂಕಿನ ನೀರಲಕೇರಿಯ ಯಲ್ಲಪ್ಪ ಕುರಿ ಹಾಗೂ ಪತ್ನಿ ಸುಧಾ ನಡುವೆ ಮನಸ್ತಾಪ ವ್ಯಕ್ತವಾಗಿತ್ತು.ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿನ ತವರು ಮನೆಯಲ್ಲಿ ಹೊಗಿದ್ದ ಸುಧಾ, ಗಂಡನೊಂದಿಗಿನ ಜಗಳದಿಂದ ಆತ್ಮಹತ್ಯೆಗೂ ಯತ್ನಿಸಿದ್ದರು.

    ಅತ್ಮಹತ್ಯೆ ಯತ್ನದ ಬಳಿಕ ಧಾರವಾಡ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಕೊನೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಪಡೆದು, ಗಂಡನ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯ ಲೋಕ್​ ಅದಾಲತ್​​ನಲ್ಲಿ ಇಬ್ಬರನ್ನೂ ನ್ಯಾಯಾಧೀಶರೇ ಒಂದು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹಳ್ಳದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ತಪ್ಪೊಪ್ಪಿಕೊಂಡ ಆಸ್ಪತ್ರೆ, ಯಾರೇ ಆದರೂ ಕ್ರಮ ಕೈಗೊಳ್ಳಿ ಅಂದ್ರು ಆರೋಗ್ಯ ಸಚಿವರು

    ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ವಿವಾದಾತ್ಮಕ ಟ್ವೀಟ್​: ಬಿಜೆಪಿಯಿಂದ ದೂರು ದಾಖಲಾದ ಬಳಿಕ ವರ್ಮಾ “ಯೂ ಟರ್ನ್​”!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts