

ಮಹಾರಾಷ್ಟ್ರ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ರಾಜಕೀಯ ಕ್ಷೇತ್ರದಲ್ಲಿ ಅಜೇಯ, ಅವರು ರಾಜಕೀಯದ 'ಭೀಷ್ಮ ಪಿತಾಮಹ' ಎಂದು ಶಿವಸೇನಾ (ಉದ್ಧವ್ ಬಾಲಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವತ್ ಹೇಳಿದರು.
ಇದನ್ನೂ ಓದಿ: ಹರ್ಡೀಕರ್ ತತ್ವಾದರ್ಶದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ
ಆಗಸ್ಟ್ 26 ರಂದು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎನ್‌ಸಿಪಿ ಮಠಾಧೀಶರ 'ಅಜಿತ್ ಪವಾರ್ ನಮ್ಮ ನಾಯಕ' ಎಂಬ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಜಯ್ ರಾವತ್ ಈ ರೀತಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ(UBT) ನಾಯಕ, "ಶರದ್ ಪವಾರ್ ಅವರು ಛತ್ರಪತಿ ಶಿವಾಜಿಯವರ ರೀತಿಯಲ್ಲಿಯೇ ತಮ್ಮ ಬಂಡಾಯಗಾರರೊಂದಿಗೆ ವ್ಯವಹರಿಸುತ್ತಿದ್ದಾರೆ" ಎಂದು ಹೇಳಿದರು.
"ಬಂಡಾಯಗಾರರ ವಿರುದ್ಧ ಹೋರಾಡಲು ಶರದ್ ಪವಾರ್, ಗೆರಿಲ್ಲಾ ಯುದ್ಧ ತಂತ್ರಗಳನ್ನು ಬಳಸುತ್ತಿದ್ದಾರೆ. ಅವರ ಪಕ್ಷವು ಬಿಜೆಪಿಯೊಂದಿಗೆ ಯುದ್ಧಭೂಮಿಯಲ್ಲಿ ಹೋರಾಡುತ್ತಿದೆ" ಎಂದು ಹೇಳಿದರು.
ಎನ್‌ಸಿಪಿ ಮುಖ್ಯಸ್ಥರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, "ಶರದ್ ಪವಾರ್ ಎಂದಿಗೂ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ. ಅವರು ಮಹಾ ವಿಕಾಸ್ ಅಘಾಡಿ ಮತ್ತು ಇಂಡಿಯಾ ಬ್ಲಾಕ್‌ನ ಪ್ರಮುಖ ನಾಯಕ. ಇದರರ್ಥ ಅವರು ಎರಡು ಕಲ್ಲಿನ ಮೇಲೆ ನಿಂತಿದ್ದಾರೆ ಎಂದಲ್ಲ, ಅವರ ಬಗ್ಗೆ ಯಾರಿಗೂ, ಯಾವುದೇ ಗೊಂದಲವಿಲ್ಲ" ಎಂದು ಹೇಳಿದರು,(ಏಜೆನ್ಸೀಸ್).